Cinema News: ಲಕುಮಿ, ಯಾರೇ ನೀ ಅಭಿಮಾನಿ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್ ನಿಶ್ಚಿತಾರ್ಥ ನಡೆದಿದ್ದು, ಶುಭ ಸಮಾರಂಭದ ಫೋಟೋಗಳನ್ನ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Cinema News: ಸ್ಯಾಂಡಲ್ವುಡ್ನಲ್ಲಿ ಮಂಗಳ ಗಾನ ಮತ್ತೊಮ್ಮೆ ಕೇಳಿ ಬರುತ್ತಿದೆ. ಜನಪ್ರಿಯ ಧಾರಾವಾಹಿ ‘ಲಕುಮಿ’ ಹಾಗೂ ‘ಯಾರೇ ನೀ ಅಭಿಮಾನಿ’ ಮೂಲಕ ಮನೆಮಾತಾಗಿರುವ ನಟಿ ಸುಷ್ಮಾ ಶೇಖರ್ ತಮ್ಮ ಜೀವನದ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ.
ನಿಶ್ಚಿತಾರ್ಥ ನೆರವೇರಿದ್ದು, ಸಮಾರಂಭದ ಸುಂದರ ಕ್ಷಣಗಳನ್ನು ತಾವು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಗಂಡನ ಜೊತೆ ಪಾಂಡಿಚೇರಿಯಲ್ಲಿ Vaishnavi Gowda
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಷ್ಮಾ, ನಂತರ ‘ಲಕುಮಿ’, ‘ಯಾರೇ ನೀ ಅಭಿಮಾನಿ’ ಹಾಗೂ ‘ಗಿಣಿರಾಮ’ ಸೀರಿಯಲ್ಗಳ ಮೂಲಕ ವಿಶೇಷ ಹೆಸರು ಗಳಿಸಿದ್ದರು. ಕೆಲವು ದಿನಗಳ ಕಾಲ ನಟನೆಯಿಂದ ದೂರ ಇದ್ದ ಸುಷ್ಮಾ, ಇದೀಗ ಮದುವೆಯ ಸುವಾರ್ತೆಯೊಂದಿಗೆ ಮತ್ತೆ ಚರ್ಚೆಯಲ್ಲಿ ಮೂಡಿದ್ದಾರೆ.
ಮದುವೆಯಾಗುತ್ತಿರುವ ಯುವಕನ ಬಗ್ಗೆ ಮಾಹಿತಿಯನ್ನು ಇನ್ನೂ ಬಹಿರಂಗ ಮಾಡದ ಸುಷ್ಮಾ, ನಿಶ್ಚಿತಾರ್ಥದ ಫೋಟೋಗಳೊಂದಿಗೆ “He asked, I said Yes” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಟಿ ರಜನಿ ಸೇರಿದಂತೆ ಹಲವು ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರೆ, ಈಗ ಸುಷ್ಮಾ ಕೂಡ ಬಹುಕಾಲದ ಗೆಳೆಯನ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
MUST WATCH: ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಭೂಪ- ಮುದ್ದಿನ ಗಂಡನ್ನು ಅಪ್ಪಿಕೊಂಡ ಯುವತಿಯರು




