Tumakuru News : ಇಂದು ಬೆಳ್ಳಂಬೆಳಗ್ಗೆ APMC ಮಾರುಕಟ್ಟೆ ಹಾಗೂ KSRTC ಬಸ್ ನಿಲ್ದಾಣಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tumakuru News : ಇಂದು ಬೆಳ್ಳಂಬೆಳಗ್ಗೆ APMC ಮಾರುಕಟ್ಟೆ ಹಾಗೂ KSRTC ಬಸ್ ನಿಲ್ದಾಣಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ (B. Veerappa) ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ವೇಳೆ ಪಾನ್ ಪರಾಗ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಇಂತಹ ವಸ್ತುಗಳನ್ನು ಮಾರಾಟ ಮಾಡದಂತೆ ಖಡಕ್ ಸೂಚನೆ ನೀಡಿದ್ರು.
ಇದನ್ನು ಓದಿ : Hubli : ಹಳೇ ದ್ವೇಷಕ್ಕೆ ಚಾಕುವಿನಿಂದ ಇರಿದು ಯುವಕನ ಕೊಲೆ!
APMC ಮಾರುಕಟ್ಟೆ, KSRTC ಬಸ್ ಸ್ಟಾಂಡ್ಗೆ ಭೇಟಿ ನೀಡಿ ಪರಿಶೀಲನೆ
ತುಮಕೂರಿನ ಯಲ್ಲಾಪುರ ಬಳಿಯ APMC Market, ಹಾಗೂ ತುಮಕೂರು ನಗರದಲ್ಲಿರುವ KSRTC Bus Stand ಗೆಭೇಟಿ ಪರಿಶೀಲನೆ ನಡೆಸಿದ್ರು. ಈ ವೇಳೆ ವ್ಯಾಪಾರಸ್ಥರು ಹಾಗೂ ರೈತರನ್ನ ಮಾತನಾಡಿಸಿ ಸಮಸ್ಯೆಯನ್ನ ಆಲಿಸಿದ್ರು. ಇದೇ ವೇಳೆ ವಿದ್ಯುತ್, ನೀರು, ಶೌಚಾಲಯ ಸಮಸ್ಯೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿದ್ರು.
ಜನರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ
ಈ ವೇಳೆ ಜನರು ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರೊಂದಿಗೆ ಹಂಚಿಕೊಂಡರು. ಸಮಸ್ಯೆ ಆಲಿಸಿದ ವೀರಪ್ಪ ಅವರು ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಖಡಕ್ ಸೂಚನೆಯನ್ನು ನೀಡಿದ್ರು. ಈ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯ ಮೂರ್ತಿ ವೀರಪ್ಪ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಹಾಜರಿದ್ರು.
ಇದನ್ನು ನೋಡಿ : ತುಮಕೂರು KSRTCಗೆ ಲಾಟರಿ DIGITAL PAYMENT ಗೆ ಫುಲ್ ರೆಸ್ಪಾನ್ಸ್




