Murder : ಹಳೇ ದ್ವೇಷದ ಹಿನ್ನೆಲೆಯಲ್ಲಿ, ಯುವಕನೊಬ್ಬನಿಗೆ ಪಾಪಿಗಳು ಚಾಕು ಹಾಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Murder : ಹಳೇ ದ್ವೇಷದ ಹಿನ್ನೆಲೆಯಿಂದ ಯುವಕನೊಬ್ಬನಿಗೆ ಚಾಕು ಇರಿದು ಭೀಕರ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆ, ಬ್ಯಾಳಿ ಪ್ಲಾಟ್ ಬಳಿ ಸಂಭವಿಸಿದೆ.
ಚಾಕುವಿನಿಂದ ಇರಿದು ಕೊಲೆ
ಕೊಲೆಯಾದ ಯುವಕನನ್ನು ಮಲ್ಲಿಕ ಅದಂಬಾಯಿ (Mallika Adambai) ಎಂದು ಗುರುತಿಸಲಾಗಿದೆ. ಆತನ ಸಹಚರರು ಹಳೇ ದ್ವೇಷಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಸೆಟ್ಲಿಮೆಂಟ್ ಹುಡುಗರು ಎಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : LA 2028 Olympics: ಒಲಿಂಪಿಕ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಈ ಘಟನೆಯು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಲು CCTV ಕ್ಯಾಸೆಟ್ಗಳು, ಸಾಕ್ಷ್ಯಗಳು ಹಾಗೂ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಡಿಸಿಪಿ ಮಹನಿಂಗ ನಂದಗಾವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದರ ಜೊತೆಗೆ ಕಮೀಷನರ್ ಅವರು ಕೈಯಲ್ಲಿ ಲಾಟಿ ಹಿಡಿದು, ಬೈಕ್ ಮೇಲೆ ಗುಂಪು ಗುಂಪಾಗಿ ಹೋಗುತ್ತಿದ್ದವರನ್ನು ತಡೆದು ಪರಿಶೀಲನೆ ಮಾಡುತ್ತಿದ್ದರು.
ಇದನ್ನು ನೋಡಿ : ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ; 50ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ, ಸಾವಿರಾರು ಟನ್ ಕಬ್ಬು ಭಸ್ಮ!




