LA 2028 Olympics : ಅಮೆರಿಕದ ಲಾಸ್ ಏಂಜಲೀಸ್ನಲ್ಲಿ 2028 ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವು ಜುಲೈ 14, 2028 ರಿಂದ ಜುಲೈ 30 ರವರೆಗೆ ನಡೆಯಲಿದೆ.

2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವು ಜುಲೈ 14ರಿಂದ ಜುಲೈ 30ರವರೆಗೆ ನಡೆಯಲಿದೆ. ಒಟ್ಟು 36 ಕ್ರೀಡೆಗಳು ಸೇರಿದಂತೆ, ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಒಲಿಂಪಿಕ್ಸ್ ಆಯೋಜನೆ ಆಗಲಿದೆ.
128 ವರ್ಷಗಳ ನಂತರ ಕ್ರಿಕೆಟ್ ಒಲಿಂಪಿಕ್ಸ್ಗೆ ಸೇರಿಕೆ
ಕ್ರಿಕೆಟ್ ಪಂದ್ಯಾವಳಿಯನ್ನು ಈ ಬಾರಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ T20 ಮಾದರಿಯಲ್ಲಿ ಆಯೋಜಿಸಲಾಗಿದ್ದು, ಜುಲೈ 12ರಿಂದ ಜುಲೈ 29ರವರೆಗೆ ಪಂದ್ಯಗಳು ನಡೆಯಲಿವೆ.
- ಮಹಿಳಾ ಫೈನಲ್: ಜುಲೈ 20
- ಪುರುಷರ ಫೈನಲ್: ಜುಲೈ 29
- ಪಂದ್ಯ ಸ್ಥಳ: ಪೊಮೊನಾ ಫೇರ್ಗ್ರೌಂಡ್ಸ್ ಕ್ರೀಡಾಂಗಣ, LA ನಿಂದ 50 ಕಿಮೀ ದೂರದಲ್ಲಿ
ಇನ್ನು ಪ್ರತಿ ವಿಭಾಗದಲ್ಲೂ ಆರು ತಂಡಗಳು ಪೈಪೋಟಿ ನಡೆಸಲಿದ್ದು, ಪ್ರತಿ ತಂಡದಲ್ಲಿ 15 ಸದಸ್ಯರಂತೆ ಒಟ್ಟು 180 ಆಟಗಾರರು ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ : ಮದುವೆಯಲ್ಲಿ ವರನಿಗೆ ಚಾಕು ಇರಿದ ವ್ಯಕ್ತಿ – ಕೊಲೆಗಾರನನ್ನು ಚೇಸ್ ಮಾಡಿದ Drone
ಅರ್ಹತೆ ಹೇಗೆ?
ಅಮೆರಿಕಾ ಆತಿಥೇಯ ರಾಷ್ಟ್ರವಾದುದರಿಂದ ನೇರ ಪ್ರವೇಶ ಪಡೆಯಲಿದೆ. ಉಳಿದ 5 ರಾಷ್ಟ್ರಗಳು ಹೇಗೆ ಅರ್ಹತೆ ಪಡೆಯಬೇಕು ಎಂಬುದರ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ. ಸಂಘಟನಾ ಸಮಿತಿಯ ಪ್ರಕಾರ, ಡಬಲ್ ಹೆಡರ್ ಸೇರಿ ಬಹುತೇಕ ಎಲ್ಲಾ ದಿನಗಳಲ್ಲಿ ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಒಲಿಂಪಿಕ್ಸ್ ಇತಿಹಾಸ
ಕ್ರಿಕೆಟ್ ಒಲಿಂಪಿಕ್ಸ್ಗೆ ಮೊದಲ ಬಾರಿಗೆ 1900ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಾತ್ರ ಸೇರಿಸಲಾಗಿತ್ತು. ಆಗ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ನಡೆದ 2 ದಿನಗಳ ಟೆಸ್ಟ್ ಮಾದರಿಯ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 158 ರನ್ಗಳಿಂದ ಜಯ ಸಾಧಿಸಿತ್ತು.
LA 2028ಕ್ಕೆ ಸೇರಿದ ಹೊಸ ಕ್ರೀಡೆಗಳು
- ಬೇಸ್ಬಾಲ್/ಸಾಫ್ಟ್ಬಾಲ್
- ಫ್ಲ್ಯಾಗ್ ಫುಟ್ಬಾಲ್
- ಲ್ಯಾಕ್ರೋಸ್ (Sixes)
- ಸ್ಕ್ವ್ಯಾಶ್
2028ರ ಒಲಿಂಪಿಕ್ಸ್ ವಿಶ್ವ ಕ್ರೀಡಾಭಿಮಾನಿಗಳಿಗೆ ಹೊಸ ಕುತೂಹಲ, ವಿಶೇಷವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣವನ್ನು ನೀಡಲಿದೆ.
ಇದನ್ನು ನೋಡಿ : BIG-IMPACT |ಇದು ನಿಮ್ಮ ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್- ವುಮೆನ್ಸ್ ಥೀಮ್ ಪಾರ್ಕ್ ಫುಲ್ ಕ್ಲೀನ್.. ಕ್ಲೀನ್




