Delhi Car Blast Case : ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ತುಮಕೂರಿನ ಓರ್ವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿದೆ.

ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟ (Car Blast)ಸಂಬಂಧ NIA ತೀವ್ರ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆ ದೇಶದೆಲ್ಲೆಡೆ High Alert ಘೋಷಿಸಲಾಗಿದ್ದು, ಇತ್ತ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಮಾಜಿ ಉಗ್ರ ಮುಜಾಹಿದ್ಧೀನ್ ಎಂಬಾತನನ್ನು ಎಎಸ್ಪಿ ಪುರುಷೋತ್ತಮ್ (PurushotTam) ನೇತೃತ್ವದಲ್ಲಿ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮಾಡಿದ್ದಾರೆ.
ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ
ಮಾಜಿ ಉಗ್ರನನ್ನು 2016ರಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 6 ವರ್ಷಗಳ ಕಾಲ ತಿಹಾರ್ ಜೈಲಿನಲಿದ್ದ. ಕಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿ, ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ ಮಾಡಲಾಗಿದೆ. ಪ್ರಕರಣದಲ್ಲಿ ಈತನ ಪಾತ್ರವಿಲ್ಲ ಎಂದು ತಿಳಿದುಬಂದಿದ್ದು, ಬಿಟ್ಟುಕಳುಹಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಕಾಂಗ್ರೆಸ್ ಗೆ ಗುಡ್ ಬೈ ಹೇಳ್ತಾರಾ K.N Rajanna..?
ತುಮಕೂರಿನ P.H Colony ನಿವಾಸಿ
ಮುಜಾಯುದ್ಧಿನ್ ತುಮಕೂರಿನ P.H Colony ನಿವಾಸಿಯಾಗಿದ್ದು, ಈ ಹಿಂದೆ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದ್ದೆ. ಸ್ಫೋಟ ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಸಿದ ಪೊಲೀಸರು. ಸ್ಫೋಟ ಪ್ರಕರಣದಲ್ಲಿ ಆತನ ಏನು ಇಲ್ಲ ಅನ್ನೋದು ದೃಢವಾದ ಹಿನ್ನಲೆ ಮುಜಾಯುದ್ಧಿನನ್ನು ಬಿಟ್ಟು ಕಳುಹಿಸಿದ್ದಾರೆ.
ಆದರೆ ಉಗ್ರ ಸಂಘಟನೆಯ ನಂಟುವುಳ್ಳ ವ್ಯಕ್ತಿ ಸಾರ್ವಜನಿಕರ ನಡುವೆ ಇದ್ದಾನೆ ಅನ್ನೋ ಸುದ್ಧಿ ಕೇಳಿ ಇಡೀ ತುಮಕೂರಿಗರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಇದನ್ನು ನೋಡಿ : AMAZON PRODUCT DELIVERY AGENCY ಏಜೆನ್ಸಿಯ ಕಳ್ಳಾಟ- ಉದ್ಯೋಗಿಗಳನ್ನು ಬೀದಿಗೆ ತಂದ ಕಂಪನಿ




