K.N Rajanna : ಸಚಿವ ಸ್ಥಾನ ಕಳೆದುಕೊಂಡ ರಾಜಣ್ಣ ಮತ್ತೆ ಮಂತ್ರಿಗಿರಿಗಾಗಿ ಆಸೆ ಪಡ್ತಾ ಇದ್ದು, ಮಾತುಕತೆಗೆ ಹೈಕಮಾಂಡ್ಗೆ ರಾಜಣ್ಣ ಪತ್ರಗಳ ಮೇಲೆ ಪತ್ರಗಳನ್ನು ಬರೆಯುತ್ತಿದ್ದಾರೆ.

ಸಚಿವ ಸ್ಥಾನ ಕಳೆದುಕೊಂಡ ರಾಜಣ್ಣ (K.N Rajanna) ಮತ್ತೆ ಮಂತ್ರಿಗಿರಿಗಾಗಿ ಆಸೆ ಪಡ್ತಾ ಇದ್ದು, ಮಾತುಕತೆಗೆ ಹೈಕಮಾಂಡ್ಗೆ ರಾಜಣ್ಣ ಪತ್ರಗಳ ಮೇಲೆ ಪತ್ರಗಳನ್ನು ಬರೆಯುತ್ತಿದ್ದಾರೆ.
ಇತ್ತ ಬಿಹಾರ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಹೈಕಮಾಂಡ್ ಫುಲ್ ಬ್ಯೂಸಿಯಾಗಿದ್ದು, ರಾಜಣ್ಣ ಪತ್ರಕ್ಕೆ ಹೈಕಮಾಂಡ್ ಉತ್ತರನ್ನು ನೀಡ್ತಾ ಇಲ್ಲ.. ಹೈಕಮಾಂಡ್ ಸಮಯ ಕೊಟ್ಟರೆ ಡೆಲ್ಲಿಗೆ ಹೋಗಿ ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಕೇಳುತ್ತೇನೆ ಎಂದಿದ್ರು.
CM ಗಾಗಿ ರಾಜಣ್ಣ ಮೊನ್ನೆ ಔತಣಕೂಟ
Cm ಆಪ್ತರಾಗಿರೋ ರಾಜಣ್ಣ, ತನ್ನ ಆಪ್ತನಿಗೆ ಸಚಿವಸ್ಥಾನ ಕೊಡಿಸುವಲ್ಲಿ ವಿಫಲರಾಗಿದ್ದು ಹೇಗಾದ್ರು ಮಾಡಿ ಮಂತ್ರಿಗಿರಿ ಪಡೆದುಕೊಳ್ಳಲು ಪ್ರಯತ್ನಿಸ್ತಿದ್ದಾರೆ. ಅಲ್ದೇ ಸಿಎಂಗಾಗಿ ರಾಜಣ್ಣ ಮೊನ್ನೆ ಔತಣಕೂಟವನ್ನು ಏರ್ಪಡಿಸಿದ್ರು, ಆದ್ರೆ ಕೊನೆ ಕ್ಷಣದಲ್ಲಿ ಸಿಎಂ ತುಮಕೂರು ಭೇಟಿ Cancel ಆಗಿದ್ದು, ರಾಜಣ್ಣ ಬೇಸರದಲ್ಲಿಯೇ ಇದ್ದರು.
ಸ್ವಪಕ್ಷದ ನಾಯಕರಿಗೆ ಟಾಂಗ್
ಇನ್ನು ಸಚಿವ ಸ್ಥಾನ ಕಳೆದು ಕೊಂಡ ಬಳಿಕ ರಾಜಣ್ಣ, ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಹೆಚ್ಚಾಗಿ ಸಂಚಾರ ಮಾಡ್ತಾ ಇರೋ ಮಾಜಿ ಸಚಿವ ರಾಜಣ್ಣ, ಇಂದು ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಕಾರ್ಯಕ್ರಮದಲ್ಲಿ ಕೆ.ಎನ್ ರಾಜಣ್ಣ ಮಾರ್ಮಿಕವಾಗಿ ನುಡಿಯುತ್ತಲೇ ಸ್ವಪಕ್ಷದ ನಾಯಕರಿಗೆ ಟಾಂಗ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಇದನ್ನು ಓದಿ : Gold And Silver Rate Today : ಚಿನ್ನದ ಬೆಲೆ ಏರಿಕೆ – ಬೆಳ್ಳಿ ಬೆಲೆ ಸೂಪರ್ ಜಿಗಿತ

ಕಾಂಗ್ರೆಸ್ ಪಕ್ಷ ನನಗೆ ಸರಿಯಾಗಿ ಗೌರವ ಕೊಡಲಿಲ್ಲ
ಇನ್ನು, ನಾನು 2004ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದೆ. ಆಗ ಕಾಂಗ್ರೆಸ್ ಪಕ್ಷ ನನಗೆ ಸರಿಯಾಗಿ ಗೌರವ ಕೊಡಲಿಲ್ಲ ಅಂತಾ ನಾನು ಜೆಡಿಎಸ್ಗೆ ಹೋದೆ, ಆಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಂಪ್ಲೀಟ್ ಆಗಿ ವೈಟ್ ವಾಶ್ ಆಗಿತ್ತು. ಈಗ ಅಂತಹ ಸಂದರ್ಭ ಬರುತ್ತೋ ಏನೋ ಗೊತ್ತಿಲ್ಲ ಅಂದಿದ್ದಾರೆ.
ಅಲ್ದೇ ಮುಂದಿನ ದಿನಗಳಲ್ಲಿ ಮಧುಗಿರಿಯಲ್ಲಿ ಕಾಂಗ್ರೆಸ್ ಖಾಲಿ ಆಗಿರುತ್ತದೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ರಾಜಣ್ಣ ಸಾಕಷ್ಟು ಬಾರಿ ಹೇಳಿದ್ದು, ಈಗ ಆ ಮಾತನ್ನು ಪುನರುಚ್ಛಾರ ಮಾಡಿದ್ದಾರೆ.
ಅಲ್ದೇ ನಾನು ಬೇರೆ ಪಕ್ಷದಿಂದಲೂ ನಿಂತರೂ ನನ್ನ ಜನರು ನನನ್ನು ಗೆಲ್ಲಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದು, ಮುಂದಿನ ದಿನಗಳಲ್ಲಿ ರಾಜಣ್ಣ ಪಕ್ಷಕ್ಕೆ ಗುಡ್ ಬೈ ಹೇಳಬಹುದು ಎಂಬ ಊಹಾಪೋಹ ಎದ್ದಿವೆ.
ದೇವೇಗೌಡರಿಗೂ ರಾಜಣ್ಣ ಟಾಂಗ್
ಬಳಿಕ ಮಾತನಾಡಿದ ರಾಜಣ್ಣ, ದೇವೇಗೌಡರು ಇಲ್ಲಿಗೆ ಬಂದು ನನ್ನನ್ನು ಸೋಲಿಸಿದವರನ್ನು ಸೋಲಿಸಿ, ಅಂತಾ ಎದೆ ಬಡಿದುಕೊಂಡು ಹೋದ್ರು ಆದ್ರೆ ಈ ಕ್ಷೇತ್ರದ ಜನ ನನಗೆ ಐದುವರೆ ಸಾವಿರ ಲೀಡ್ ವೋಟ್ ಕೊಟ್ಟಿದ್ದಾರೆ.
ರಾಜಣ್ಣಗೆ ಒಂದು ವೋಟ್ ಬೀಳಲ್ಲಾ ಅಂದಿದ್ರು ಆದ್ರೆ ನನಗೆ 5 ಸಾವಿರಕ್ಕೂ ಹೆಚ್ಚು ವೋಟ್ ಕೊಟ್ಟಿದ್ದಾರೆ ಎನ್ನುತ್ತಾ ದೇವೇಗೌಡರಿಗೂ ರಾಜಣ್ಣ ಟಾಂಗ್ ಕೊಟ್ಟಿದ್ರು.
ರಾಜಣ್ಣ ಪಕ್ಷ ಬಿಟ್ಟು ಹೋಗ್ತಾರಾ..?
ಅದೇನೆ ಆಗಲಿ, ಸಚಿವ ಸ್ಥಾನ ಹೋದ್ರು ಕೂಡ ಈವರೆಗೂ ಪಕ್ಷದ ಮೇಲೆ ನಿಷ್ಠೆ ಇಟ್ಟಿದ್ದ ರಾಜಣ್ಣ ಇಂದು ಮಾರ್ಮಿಕವಾಗಿ ನುಡಿದಿರೋದು, ಮುಂದಿನ ದಿನಗಳಲ್ಲಿ ರಾಜಣ್ಣ ಪಕ್ಷ ಬಿಟ್ಟು ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ. ರಾಜಣ್ಣ ಮುನಿಸನ್ನು ಹೈಕಮಾಂಡ್ ಅರ್ಥೈಸಿಕೊಂಡು ರಾಜಣ್ಣಗೆ ಮತ್ತೆ ಸಚಿವ ಸ್ಥಾನ ಕೊಡ್ತಾರಾ ಎಂದು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ಇದನ್ನು ನೋಡಿ : ಪಾಪಾ ರಸ್ತೆ ಅಪಘಾತದಲ್ಲಿ ಚಾಲಕ ಸಾವು – ಚಾಲಕರ ಸಂಘದವ್ರು ಏನ್ಮಾಡಿದ್ರು ಗೊತ್ತಾ




