Rashmika Mandanna : ಎಲ್ಲರ ನಿರೀಕ್ಷೆಯಂತೆ `ದಿ ಗರ್ಲ್ಫ್ರೆಂಡ್’ (The Girlfriend) ಚಿತ್ರದ ಸಕ್ಸಸ್ಮೀಟ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ (Vijay Devarkonda) ನಡುವಿನ ಪ್ರೇಮ ವಿಚಾರವನ್ನ ಬಯಲು ಮಾಡಿದೆ.

Rashmika Mandanna: ‘ದಿ ಗರ್ಲ್ಫ್ರೆಂಡ್’ (The Girlfriend) ಚಿತ್ರದ ಸಕ್ಸಸ್ಮೀಟ್ ವೇದಿಕೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಪ್ರೇಮ ಬಾಂಧವ್ಯ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ರಶ್ಮಿಕಾ ಕೈಗೆ ದೇವರಕೊಂಡ ಸಿಹಿಮುತ್ತು
ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ವಿಜಯ್ ದೇವರಕೊಂಡ ಅವರು, ವೇದಿಕೆಯಲ್ಲೇ ರಶ್ಮಿಕಾ ಕೈಗೆ ಮುತ್ತು ನೀಡಿದ್ದಾರೆ. ಈ ಕ್ಷಣಕ್ಕೆ ರಶ್ಮಿಕಾ ನಾಚಿ ನಗೆ ಬೀರಿದ್ದು, ಅಭಿಮಾನಿಗಳ ಮನ ಗೆದ್ದಿದೆ.

ರಶ್ಮಿಕಾ ನಿಜ ಜೀವನದಲ್ಲೂ ‘ದಿ ಗರ್ಲ್ಫ್ರೆಂಡ್’ ಚಿತ್ರದ ನಾಯಕಿಯಂತೆ!
ವಿಜಯ್ ದೇವರಕೊಂಡ ರಶ್ಮಿಕಾರನ್ನು ಹಾಡಿ ಹೊಗಳುತ್ತಾ, “ರಶ್ಮಿಕಾ ನಿಜ ಜೀವನದಲ್ಲೂ ‘ದಿ ಗರ್ಲ್ಫ್ರೆಂಡ್’ ಚಿತ್ರದ ನಾಯಕಿಯಂತೆಯೇ ,ಧೈರ್ಯಶಾಲಿ, ಶ್ರಮಜೀವಿ ಹಾಗೂ ಮೃದುಸ್ವಭಾವದವರು”ಎಂದು ಹೇಳಿದ್ದಾರೆ.
ಇದನ್ನೂ ಓದಿ : Tollywood News: ರಶ್ಮಿಕಾ–ವಿಜಯ್ ದೇವರಕೊಂಡ ಮದುವೆ ಘೋಷಣೆ!
ಫೆಬ್ರವರಿ 2026 ಕ್ಕೆ ವಿಜಯ್‑ರಶ್ಮಿಕಾ ಮದುವೆ
ಮದುವೆ ಕುರಿತು ಅಧಿಕೃತ ಘೋಷಣೆ ಇನ್ನೂ ಆಗದಿದ್ದರೂ, ಇಬ್ಬರ ನಡವಳಿಕೆ ಎಲ್ಲವನ್ನೂ ಹೇಳುತ್ತಿದೆ. ವರದಿಗಳ ಪ್ರಕಾರ, ಫೆಬ್ರವರಿ 26ರಂದು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆಯಾಗಲಿದ್ದು, ಈಗಾಗಲೇ ರಹಸ್ಯ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ.
ಏಳು ವರ್ಷಗಳಿಂದ ಪ್ರೀತಿಸುತ್ತಿರುವ ಜೋಡಿ
ಗೀತ ಗೋವಿಂದಂ ಹಾಗೂ ಡಿಯರ್ ಕಾಂಬ್ರೆಡ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ಈ ಜೋಡಿ, ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ʼದಿ ಗರ್ಲ್ಫ್ರೆಂಡ್’ ಚಿತ್ರದ ಸಕ್ಸಸ್ಮೀಟ್
ʼದಿ ಗರ್ಲ್ಫ್ರೆಂಡ್’ ಚಿತ್ರದ ಸಕ್ಸಸ್ಮೀಟ್ನಲ್ಲಿ ವಿಜಯ್ ದೇವರಕೊಂಡ ಹಾಜರಾಗಿದ್ದು, ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಎಲ್ಲರ ಮುಂದೆಯೇ ದೃಢಪಡಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
MUST WATCH: ವಿಜಯ್ ದೇವರಕೊಂಡ ಕುಟುಂಬದ ಜೊತೆ ಪುಷ್ಪ-2 ನೋಡಿದ ರಶ್ಮಿಕಾ ಮಂದಣ್ಣ




