Tollywood News: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Deverakonda) ಮದುವೆ ಈಗಾಗಲೇ ಫಿಕ್ಸ್ ಆಗಿದೆ.

Tollywood News : ಸೌತ್ ಸಿನಿ ಇಂಡಸ್ಟ್ರಿಯ ಪಾಪ್ಯುಲರ್ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಇಬ್ಬರ ಮದುವೆ ಮುಂದಿನ ವರ್ಷ ಫೆಬ್ರವರಿ 26 ರಂದು ನಡೆಯಲಿರುವುದಾಗಿ ಮೂಲಗಳು ತಿಳಿಸಿವೆ.
ರಶ್ಮಿಕಾ–ವಿಜಯ್ ಮದುವೆ ಫಿಕ್ಸ್! ಫೆಬ್ರವರಿ 26ರಂದು ಸ್ಟಾರ್ ಕಪಲ್ಗೆ ಶುಭ ಮುಹೂರ್ತ
ಈ ಬಗ್ಗೆ ರಶ್ಮಿಕಾ -ವಿಜಯ್ ದೇವರಕೊಂಡ ಆಗಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇಂದು ಹೈದರಾಬಾದ್ನ ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆ ವಿಚಾರವನ್ನು ಮಾಧ್ಯಮದ ಮುಂದೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

“ದಿ ಗರ್ಲ್ಫ್ರೆಂಡ್” ಸಕ್ಸಸ್ ಮೀಟ್ನಲ್ಲಿ ಮದುವೆ ಘೋಷಣೆ?
ಈ ಸುದ್ದಿಗೋಷ್ಠಿ ರಶ್ಮಿಕಾ ನಟನೆಯ ‘ದಿ ಗರ್ಲ್ಫ್ರೆಂಡ್’ (The Girlfriend) ಚಿತ್ರದ ಸಕ್ಸಸ್ ಮೀಟ್ ಆಗಿದ್ದು, ಅದರಲ್ಲಿ ವಿಜಯ್ ದೇವರಕೊಂಡ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಇಬ್ಬರೂ ಮದುವೆ ಕುರಿತು ಮಾತನಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: Rashmika Mandanna : ರಶ್ಮಿಕಾ ಅಭಿನಯದ ‘ಥಮ’ ಸಿನಿಮಾದ ಹಾಟ್ ಸೀನ್ ಗಳಿಗೆ CBFCಯಿಂದ ಕತ್ತರಿ!
ಏಳು ವರ್ಷಗಳ ಪ್ರೀತಿಗೆ ಮದುವೆ ನಾಂದಿ
ಏಳು ವರ್ಷಗಳ ಪ್ರೀತಿಯ ಬಳಿಕ ಮದುವೆ ಪೀಠಕ್ಕೆ ಕಾಲಿಡುತ್ತಿರುವ ಈ ಸ್ಟಾರ್ ಕಪಲ್ನ ಸಂಬಂಧ ಕುರಿತ ವದಂತಿಗಳು ಹಲವು ವರ್ಷಗಳಿಂದ ಸುತ್ತಾಡುತ್ತಿದ್ದರೂ, ಇದೀಗ ಅದಕ್ಕೆ ಅಧಿಕೃತ ಅಂತ್ಯ ಬರಲಿದೆ ಎನ್ನಲಾಗಿದೆ.
ರಶ್ಮಿಕಾ–ವಿಜಯ್ ಅಭಿಮಾನಿಗಳಿಗೆ ಹಬ್ಬದ ಸುದ್ದಿ!
ಅಭಿಮಾನಿಗಳ ಗಮನ ಇಂದಿನ ಹೈದರಾಬಾದ್ ಸುದ್ದಿಗೋಷ್ಠಿಯತ್ತ ನೆಟ್ಟಿದೆ. ರಶ್ಮಿಕಾ–ವಿಜಯ್ ಜೋಡಿ “Yes, it’s official!” ಅಂದರೆ, ಅದು ಈ ವರ್ಷದ ಟಾಕ್ ಆಫ್ ದ ಟೌನ್ ಆಗಲಿದೆ!
MUST WATCH: ಸಿನಿಮಾ ಪ್ರಮೋಷನ್ಗೆ ತುಮಕೂರಿಗೆ EKKA MOVIE ತಂಡ ಎಂಟ್ರಿ




