BBK S12 : ಬಿಗ್ ಬಾಸ್ ಮನೆಯಲ್ಲಿ ನಡೆದ ಸಂಭಾಷಣೆಯ ವೇಳೆ ಜಾನ್ವಿ ಅವರು ವೋಟಿಂಗ್ ಪ್ರಕ್ರಿಯೆಯ ನ್ಯಾಯತೆ ಬಗ್ಗೆ ಪ್ರಶ್ನೆ ಎತ್ತಿದರು.

BBK S12 : ಬಿಗ್ ಬಾಸ್ ಮನೆಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿದೆ. ಈ ಬಾರಿ ಚರ್ಚೆಯ ಕೇಂದ್ರಬಿಂದುವಾಗಿ ನಿಂತಿರುವವರು ಸ್ಪರ್ಧಿ ಜಾನ್ವಿ (Jhanvi). ವೋಟಿಂಗ್ ಪ್ರಕ್ರಿಯೆ ಮತ್ತು ಚಾನೆಲ್ ಮಧ್ಯಸ್ಥಿಕೆ ಕುರಿತು ಅವರ ಹೇಳಿಕೆಗಳು ಮನೆಯೊಳಗೆ ಗೋಜಿಗೆ ಕಾರಣವಾಗಿವೆ.
ವೋಟಿಂಗ್ ಕುರಿತು ಜಾನ್ವಿಯ ಅನುಮಾನ
ಬಿಗ್ ಬಾಸ್ ಮನೆಯಲ್ಲಿ ನಡೆದ ಸಂಭಾಷಣೆಯ ವೇಳೆ ಜಾನ್ವಿ ಅವರು ವೋಟಿಂಗ್ ಪ್ರಕ್ರಿಯೆಯ ನ್ಯಾಯತೆ ಬಗ್ಗೆ ಪ್ರಶ್ನೆ ಎತ್ತಿದರು.
ಅವರು ಚಾನೆಲ್ ಮಧ್ಯಸ್ಥಿಕೆ ಮತ್ತು ಸ್ಪಂದನಾ ಸೇವ್ ಆಗುತ್ತಿರುವ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದರು.”ಸ್ಪಂದನಾ ಯಾಕೆ ಪ್ರತೀ ವಾರವೂ ಸೇವ್ ಆಗ್ತಾರೆ? ಅವರನ್ನು ಚಾನೆಲ್ ಎತ್ತ್ತಿದೆ ಅನ್ಸುತ್ತೆ,”ಎಂದು ಜಾನ್ವಿ ಮನದಾಳದ ಮಾತು ಹೇಳಿದರು.
ಈ ಹೇಳಿಕೆಯಿಂದ ಮನೆ ಸದಸ್ಯರ ನಡುವೆ ಹೊಸ ಚರ್ಚೆ ಪ್ರಾರಂಭವಾಯಿತು.
ಸೂರಜ್ನ ತಿರುಗೇಟು: “ನಿಮ್ಮ ಹಳ್ಳ ನೀವೇ ತೋಡಿಕೊಳ್ಳಬೇಡಿ!”
ಜಾನ್ವಿಯ ಆರೋಪಕ್ಕೆ ತಕ್ಷಣ ಸೂರಜ್ ಪ್ರತಿಕ್ರಿಯಿಸಿದರು.
ಅವರು “ಚಾನೆಲ್ ಅವರು ಯಾರನ್ನೂ ಉಳಿಸುತ್ತಿಲ್ಲ, ಇದು ಪಬ್ಲಿಕ್ ವೋಟಿಂಗ್ ಆಧಾರಿತ ಶೋ” ಎಂದು ಸ್ಪಷ್ಟಪಡಿಸಿದರು.
“ರಾಶಿಕಾ ಮತ್ತು ನನ್ನ ಮಧ್ಯೆ ಲವ್ ಟ್ರ್ಯಾಕ್ ಇದೆ ಅಂತ ನೀವು ಹೇಳ್ತೀರಾ? ಅದು ತಪ್ಪು.ಚಾನೆಲ್ ಆ್ಯಂಗಲ್ನಿಂದ ಮಾತನಾಡೋದು ಸರಿಯಲ್ಲ. ವೀಕೆಂಡ್ನಲ್ಲಿ ಈ ವಿಷಯ ಬಂದ್ರೆ ನಿಮಗೆ ತೊಂದರೆ ಆಗುತ್ತೆ, ನಿಮ್ಮ ಹಳ್ಳ ನೀವೇ ತೋಡಿಕೊಳ್ಳಬೇಡಿ,”ಎಂದು ಸೂರಜ್ ಜಾನ್ವಿಗೆ ಎಚ್ಚರಿಕೆ ನೀಡಿದರು.
ರಾಶಿಕಾ ಮತ್ತು ಸೂರಜ್ ಬಾಂಧವ್ಯ ವಿಚಾರದಲ್ಲೂ ಚರ್ಚೆ
ಜಾನ್ವಿ, ರಾಶಿಕಾ ಮತ್ತು ಸೂರಜ್ ಒಟ್ಟಿಗೆ ಮಾತನಾಡುತ್ತಿದ್ದ ವೇಳೆ ಈ ವಿವಾದ ಹುಟ್ಟಿತು.ರಾಶಿಕಾ–ಸೂರಜ್ ನಡುವೆ ಬಾಂಧವ್ಯ ಇದೆ ಎಂಬ ನಂಬಿಕೆಯಿಂದ, ಜಾನ್ವಿ ಅವರು “ಚಾನೆಲ್ ಇವರನ್ನು ಹೊರಗೆ ಕಳುಹಿಸುವುದಿಲ್ಲ” ಎಂದು ಹೇಳಿದಂತೆ ಮನೆ ಸದಸ್ಯರು ಗಮನಿಸಿದರು.ಆದರೆ ಸೂರಜ್ ಈ ವಿಚಾರವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.
ಸ್ಪಂದನಾ ಸೇವ್ ವಿಚಾರದ ಹಿಂದಿನ ಉದಾಹರಣೆ
ಇದಕ್ಕೂ ಮೊದಲು ಆರ್ಯವರ್ಧನ್ ಗುರೂಜಿ ಕೂಡ ಇದೇ ರೀತಿಯ ಆರೋಪ ಮಾಡಿದ್ದರು.
ಅಂದಾಗ ಸುದೀಪ್ ಅವರೇ ವೀಕೆಂಡ್ ಎಪಿಸೋಡ್ನಲ್ಲಿ ಕಠಿಣವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಹೀಗಾಗಿ, ಈ ವಾರ ಜಾನ್ವಿಗೂ ಇದೇ ರೀತಿಯ ಕ್ಲಾಸ್ ಸಿಗುತ್ತದೆಯೇ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಜಾನ್ವಿ ಹೇಳಿದ್ದು ಎಷ್ಟು ಸರಿ?
ಜಾನ್ವಿ ಅವರು ಹಿಂದೆಯೂ ಕಲರ್ಸ್ ಚಾನೆಲ್ನಲ್ಲಿ ಕೆಲಸ ಮಾಡಿದ್ದ ಕಾರಣದಿಂದ,ಅವರ ಈ ಆರೋಪಕ್ಕೆ ಹೆಚ್ಚು ತೂಕ ಸಿಕ್ಕಿದೆ.ಆದರೆ, ಬಿಗ್ ಬಾಸ್ ಶೋ ಪೂರ್ಣವಾಗಿ ಪಬ್ಲಿಕ್ ವೋಟಿಂಗ್ ಆಧಾರಿತ ಎಂದು ಶೋ ತಂಡ ಸ್ಪಷ್ಟಪಡಿಸಿದೆ.
ಹೀಗಾಗಿ, ಜಾನ್ವಿಯ ಮಾತು ಎಷ್ಟು ಸರಿ ಎಂಬುದನ್ನು ವೀಕೆಂಡ್ ಕಂತು ಸ್ಪಷ್ಟಪಡಿಸಬಹುದು.
ಬಿಗ್ ಬಾಸ್ ಮನೆಯಲ್ಲಿ ವೋಟಿಂಗ್ ಪ್ರಕ್ರಿಯೆ, ಚಾನೆಲ್ ಮಧ್ಯಸ್ಥಿಕೆ, ಮತ್ತು ಲವ್ ಟ್ರ್ಯಾಕ್ ಆರೋಪಗಳಿಂದ ವಾತಾವರಣ ಬಿಸಿ.
ಈ ವಿವಾದಕ್ಕೆ ಸುದೀಪ್ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೇ ಈಗ ವೀಕ್ಷಕರ ಕಣ್ತುಂಬ ನಿರೀಕ್ಷೆ.




