Cinema News: ಬಿಡುಗಡೆಗೆ ಸಿದ್ದವಾಗಿರೋ ಮೆಜೆಸ್ಟಿಕ್-2. ಚಿತ್ರದ ಹೀರೋ ಭರತ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಮೋಕ್ಷಿತ ಪೈ ಹಾಗೂ ರಿಯಾ ಸಚ್ದೇವ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Cinema News: ಕಳೆದ 14 ವರ್ಷಗಳಿಂದ ಸಹ ನಿರ್ದೇಶಕ, ಬರಹಗಾರನಾಗಿ ಸಿನಿಮಾದಲ್ಲಿ ಕೆಲಸಮಾಡಿ ಅನುಭವ ಹೊಂದಿರುವ ಪ್ರಾಣ್ ಸುವರ್ಣ, ಈಗ ನಿರ್ದೇಶಕನಾಗಿ ಕಾಲಿಟ್ಟಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ ‘ರುಕ್ಮಿಣಿ ರಾಧಾಕೃಷ್ಣ’ ಶೀಘ್ರದಲ್ಲೇ ತೆರೆಕಾಣಲಿದೆ.
ಪ್ರಾಣ್ ಸುವರ್ಣ ನಿರ್ದೇಶನದ ಮೊದಲ ಸಿನಿಮಾ ‘ರುಕ್ಮಿಣಿ ರಾಧಾಕೃಷ್ಣ’
ನಾಯಕನಾಗಿ ಭರತ್ ಕುಮಾರ್, ನಾಯಕಿಯರಾಗಿ ಮೋಕ್ಷಿತ ಪೈ, ರಿಯಾ ಸಚ್ದೇವ್ ಅಭಿನಯಿಸುತ್ತಿದ್ದಾರೆ. ಚಿತ್ರವು ತ್ರಿಕೋನ ಪ್ರೇಮಕಥೆಯ ಆಧುನಿಕ ಲವ್ ಸ್ಟೋರಿ ಆಗಿದ್ದು, ಶ್ರೀಕೃಷ್ಣ–ರಾಧೆ–ರುಕ್ಮಿಣಿಯ ಇಂದಿನ ಪೀಳಿಗೆಯ ಪ್ರೇಮಕಥೆಯಾಗಿದೆ.
ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಮುಹೂರ್ತ
ಇತ್ತೀಚೆಗೆ ಬೆಂಗಳೂರಿನ ಕುಮಾರಕೃಪಾದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದ್ದು. ಫಿಲಂ ಚೇಂಬರ್ ಅಧ್ಯಕ್ಷ ಆರ್. ನರಸಿಂಹಲು ಕ್ಲಾಪ್ ನೀಡಿದ್ದು, ನಿರ್ಮಾಪಕ ಆರ್. ಹನುಮಂತರಾಜು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

ಚಿತ್ರಕ್ಕೆ ಒಟ್ಟು 60 ದಿನಗಳ ಶೂಟಿಂಗ್ ಪ್ಲಾನ್ ರೂಪಿಸಲಾಗಿದ್ದು, ಮೊದಲ ಹಂತವನ್ನು ಬೆಂಗಳೂರು ಸುತ್ತಮುತ್ತ, ಎರಡನೇ ಹಂತವನ್ನು ಕುಂಭಕೋಣಂನಲ್ಲಿ ಚಿತ್ರೀಕರಿಸಲಾಗುತ್ತದೆ.
ಇದನ್ನೂ ಓದಿ: CINEMA NEWS: ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಟೀಸರ್ ಲಾಂಚ್..!
ಶ್ರೀಕೃಷ್ಣ–ರಾಧೆ–ರುಕ್ಮಿಣಿಯ ಪ್ರೇರಣೆಯಿಂದ ಮೂಡಿಬರುವ ಆಧುನಿಕ ಲವ್ ಸ್ಟೋರಿ
ಚಿತ್ರವನ್ನು ಶಿಲ್ಪಾ ಶ್ರೀನಿವಾಸ್ ಅರ್ಪಣೆ ಮಾಡುತ್ತಿದ್ದು, ಎನ್. ಹನುಮಂತರಾಜು ಮತ್ತು ಎನ್. ಎಚ್. ಉಮೇಶ್ ಚಂದ್ ನಿರ್ಮಾಪಕರು. ಈ ತಂಡ ‘ಪೆನ್ ಡ್ರೈವ್’ ಚಿತ್ರದ ನಿರ್ಮಾಣದ ಬಳಿಕ ಮತ್ತೊಮ್ಮೆ ಕೈಜೋಡಿಸಿದೆ.
ಸುನಾದ ಗೌತಮ್ ಸಂಗೀತ ಸಂಯೋಜನೆ, ಪ್ರಾಣ್ ಸುವರ್ಣ ನಿರ್ದೇಶನ
ಚಿತ್ರದಲ್ಲಿ 6 ಹಾಡುಗಳಿದ್ದು, ಸಂಗೀತವನ್ನು ಸುನಾದ ಗೌತಮ್ ಸಂಯೋಜಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಪ್ರಾಣ್ ಸುವರ್ಣ ಸ್ವತಃ ಬರೆದು ಆಕ್ಷನ್–ಕಟ್ ಹೇಳಿದ್ದಾರೆ.
‘ರುಕ್ಮಿಣಿ ರಾಧಾಕೃಷ್ಣ’ ಹೊಸ ಪ್ರೇಮಕಾವ್ಯ
ಚಿತ್ರಕ್ಕೆ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣ, ಎಂ. ಲಕ್ಷ್ಮಣರಾವ್ ಸಂಕಲನ, ಮಹೇಶ್ ರಾಮ್ ಸಹ ನಿರ್ದೇಶಕ. ರುಕ್ಮಿಣಿ ರಾಧಾಕೃಷ್ಣ ಚಿತ್ರವು ಮೆಜೆಸ್ಟಿಕ್–2 ಬ್ಯಾನರ್ನಿಂದ ಮೂಡಿಬರುತ್ತಿದೆ.
MUST WATCH: KANTARA-1 ಟಿಕೆಟ್ ದಂಧೆ? Gayatri Theatre ಬಳಿ ಗಲಾಟೆ | GAYATRI THEATRE NEWS |




