Gadag : ವ್ಯಕ್ತಿಯೋರ್ವನನ್ನು ಬೆತ್ತಲೆಗೊಳಿಸಿ, ಕೈ, ಕಾಲು ಕಟ್ಟಿ ಕೃಷಿಹೊಂಡದ ನೀರಿನಲ್ಲಿ ಎಸೆದಿರುವ ಘಟನೆ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ನಡೆದಿದೆ.

Gadag: ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಈಶಪ್ಪ ಕುರಿ ಅವರ ಕೃಷಿ ಜಮೀನಿನ ನೀರಿನ ಹೊಂಡದಲ್ಲಿ ಸುಮಾರು 35 ರಿಂದ 40 ವರ್ಷದ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ.
ನೀರಿನಲ್ಲಿ 40 ವರ್ಷದ ಅನಾಮಧೇಯನ ಶವ ಪತ್ತೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದುಷ್ಕರ್ಮಿಗಳು ಆ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಒಳ ಉಡುಪಿನ ಸಹಾಯದಿಂದ ಕೈ ಕಟ್ಟಿ, ಪ್ಯಾಂಟ್ನಿಂದ ಕಾಲು ಕಟ್ಟಿ, ನಂತರ ನೀರಿನ ಹೊಂಡದಲ್ಲಿ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ.
ಕೈ, ಕಾಲು ಕಟ್ಟಿ ನೀರಿನ ಹೊಂಡಕ್ಕೆ ಎಸೆದ ಶವ
ಶವದ ಮೇಲೆ ಮುಖ, ಕುತ್ತಿಗೆ ಹಾಗೂ ತಲೆಗೆ ತೀವ್ರ ಗಾಯದ ಗುರುತುಗಳು ಪತ್ತೆಯಾಗಿದ್ದು, ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಶವವನ್ನು ನೀರಿನಲ್ಲಿ ಬಿಸಾಕಿರುವ ಸಾಧ್ಯತೆ ಪೊಲೀಸ್ ತನಿಖೆಯಿಂದ ವ್ಯಕ್ತವಾಗಿದೆ.
ಇದನ್ನೂ ಓದಿ: Murder In Gadag : ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಗುರುತು ತಿಳಿಯದ ವ್ಯಕ್ತಿಯ ಶವ ಪೊಲೀಸರ ವಶಕ್ಕೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಸ್.ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ಗ್ರಾಮೀಣ ಪೊಲೀಸರ ತನಿಖೆ ತೀವ್ರ
ಈ ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶವದ ಗುರುತು ಪತ್ತೆಹಚ್ಚುವ ಹಾಗೂ ಆರೋಪಿಗಳ ಸುಳಿವು ಹುಡುಕುವ ಕಾರ್ಯ ತ್ವರಿತಗೊಳಿಸಿದ್ದಾರೆ.
ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ
ಪೊಲೀಸರು ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಆ ವ್ಯಕ್ತಿಯ ಗುರುತು ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೇ ಪ್ರಕರಣದ ನಿಖರ ಕಾರಣ ಬಹಿರಂಗವಾಗುವ ನಿರೀಕ್ಷೆ ಇದೆ.
MUST WATCH: ಕೌಟುಂಬಿಕ ಕಲಹಕ್ಕೆ ಲೆಕ್ಟರರ್ ಆತ್ಮಹ* – ಮಗಳ ಸಾವಿಗೆ ಅಳಿಯ ಕಾರಣ ಎಂದು ಹೆತ್ತವರ ಆಕ್ರೋಶ




