CINEMA NEWS: ಸ್ಯಾಂಡಲ್ವುಡ್ನ (Sandalwood) ಬಹು ನಿರೀಕ್ಷಿತ ಸಿನಿಮಾ ಲ್ಯಾಂಡ್ಲಾರ್ಡ್ ಟೀಸರ್ ರಿಲೀಸ್ (Teaser Release) ಇವೆಂಟ್ ಮಾಡಲಾಗಿದೆ. ಅಲ್ದೇ ದುನಿಯಾ ವಿಜಿ ಸಿನಿಮಾ ಟೀಸರ್ ಲಾಂಚ್ ಇವೆಂಟ್ನಲ್ಲಿ ದರ್ಶನ್ ಫ್ಯಾನ್ಸ್ ಹುಚ್ಚಾಟ ಮಾಡಿದ್ದು ಲ್ಯಾಂಡ್ ಲಾರ್ಡ್ ಟೀಸರ್ ಲಾಂಚ್ ಇವೆಂಟ್ ನಲ್ಲಿ ದರ್ಶನ್ ಅಭಿಮಾನಿಗಳ ಹುಚ್ಚಾಟ ಈಗ ವೈರಲ್ ಆಗಿದೆ.

CINEMA NEWS: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವರಂಗ್ ಚಿತ್ರಮಂದಿರದಲ್ಲಿ ನಡೆದ ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಗದ್ದಲವೇ ಉಂಟಾಗಿದೆ. ನಟಿ ರಚಿತಾ ರಾಮ್ ಮಾತನಾಡುತ್ತಿದ್ದ ವೇಳೆ ದರ್ಶನ್ ಅಭಿಮಾನಿಗಳು “ಡಿ ಬಾಸ್, ಡಿ ಬಾಸ್” ಎಂದು ಕೂಗಾಡಿ ರೊಚ್ಚಿಗೆದ್ದಿದ್ದಾರೆ, ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ : YELLOW LINE METRO :ಯೆಲ್ಲೋ ಲೈನ್ನಲ್ಲಿ ಹೊಸ 5ನೇ ಮೆಟ್ರೋ ರೈಲು ಸೇವೆ ಆರಂಭ..!
ದುನಿಯಾ ವಿಜಯ್, ಉಮಾಶ್ರೀ, ರಚಿತಾ ರಾಮ್, ರಿತನ್ಯ ಸೇರಿದಂತೆ ಚಿತ್ರತಂಡದವರು ಹಾಜರಿದ್ದರು. ಲ್ಯಾಂಡ್ ಲಾರ್ಡ್ ಚಿತ್ರದ ಟೀಸರ್ನಲ್ಲಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದ್ದು, ಚಿತ್ರ ಜನವರಿ 23, 2025 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ತಮ್ಮ ಮಗಳನ್ನು ವೇದಿಕೆಗೆ ಕರೆದು ಭಾವುಕರಾದರು. “ನನ್ನ ಮಕ್ಕಳನ್ನು ತುಂಬಾ ಕಷ್ಟಪಟ್ಟು ಸಾಕಿದ್ದೀನಿ,” ಎಂದು ಕಣ್ಣೀರು ಹಾಕಿದ ವಿಜಯ್ ಅವರ ಕ್ಷಣ ಅಭಿಮಾನಿಗಳ ಮನಸೆಳೆಯಿತು.
MUST WATCH: ಶಿರಾ-ಅರಸೀಕೆರೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ – ಪೌರಕಾರ್ಮಿಕರಿಗೆ ಸನ್ಮಾನ – ವಿದ್ಯಾರ್ಥಿಗಳಿಗೆ ಬುಕ್ಸ್ ವಿತರಣೆ




