Basavanagudi ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಮುಗಿಯುತ್ತಿದ್ದಂತೆ ಇದೀಗ ಬಸವನಗುಡಿ ಕಡಲೆಕಾಯಿ (Kadalekayi Parishe) ಪರಿಷೆಗೆ ಕೌಂಟ್ಡೌನ್ ಶುರುವಾಗಿದೆ.

Basavanagudi: ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಯಶಸ್ವಿಯಾಗಿ ಮುಗಿಯುತ್ತಿದ್ದಂತೆಯೇ, ಇದೀಗ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ 2025ಕ್ಕೆ ದಿನಗಣನೆ ಆರಂಭವಾಗಿದೆ.
ಕಡಲೆಕಾಯಿ ಪರಿಷೆ 2025ಕ್ಕೆ ದಿನಗಣನೆ ಆರಂಭ
ಇದೇ ನವೆಂಬರ್ 17ರಿಂದ ಐತಿಹಾಸಿಕ ಬಸವನಗುಡಿಯಲ್ಲಿ ಪರಿಷೆ ಆರಂಭವಾಗಲಿದ್ದು, ಸಾಂಪ್ರದಾಯಿಕತೆ ಮತ್ತು ಪರಿಸರ ಸಂರಕ್ಷಣೆಯ ಸಂಯೋಜನೆಯಾಗಲಿದೆ.
ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಈ ಬಾರಿ ವಿಶೇಷ
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸ್ಥಳೀಯ ಶಾಸಕರು ಮತ್ತು ಜಿಬಿಎ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಈ ಬಾರಿಯ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Bengaluru: ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ದಿನಾಂಕ ಫಿಕ್ಸ್!
ಕಸ ಹಾಕಿದರೆ ಬೀಳುತ್ತೇ ₹2000 ದಂಡ
ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಸಂಪೂರ್ಣ ನಿಷೇಧಿಸಲ್ಪಟ್ಟಿದ್ದು, ಬಳಸಿದರೆ ₹2000 ರವರೆಗೆ ದಂಡ ವಿಧಿಸಲಾಗುವುದು ಎಂದು ಜಿಬಿಎ ಪಶ್ಚಿಮ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಎಚ್ಚರಿಸಿದ್ದಾರೆ.
ʼಆಪರೇಷನ್ ಕಸ’ದಿಂದ ಶುಭಾರಂಭ
ಅದರ ಜೊತೆಗೆ, ಪರಿಷೆಗೆ ಬರುವ ನಾಗರಿಕರು ಎಲ್ಲೆಂದರಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಲು ಜಿಬಿಎ ‘ಆಪರೇಷನ್ ಕಸ’ ಅಭಿಯಾನವನ್ನು ಪ್ರಾರಂಭಿಸಿದೆ. ಕಸ ಹಾಕಿದರೆ ಅಥವಾ ಸ್ವಚ್ಛತೆಗೆ ಅಡ್ಡಿಯಾಗುವ ರೀತಿಯಲ್ಲಿ ವರ್ತಿಸಿದರೆ ₹2000 ದಂಡ ವಿಧಿಸಲಾಗುವುದು. ಪರಿಷೆ ಸಮಯದಲ್ಲಿ ಶಿಸ್ತಿನ ಪಾಲನೆಗಾಗಿ ಮಾರ್ಷಲ್ಗಳನ್ನೂ ನಿಯೋಜಿಸಲಾಗುತ್ತಿದೆ.
ಜಾಗೃತಿ, ದಂಡ, ಶುದ್ಧತೆ – ಈ ಬಾರಿಯ ಕಡಲೆಕಾಯಿ ಪರಿಷೆ ವಿಭಿನ್ನ!
ಪರಿಷೆಯ ವೇಳೆ ಶುದ್ಧತೆ, ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಹಬ್ಬದ ಮಾದರಿಯನ್ನು ನಿರ್ಮಿಸುವುದು ಜಿಬಿಎ ಉದ್ದೇಶವಾಗಿದೆ. ಬಸವನಗುಡಿ ಕಡಲೆಕಾಯಿ ಪರಿಷೆ ಬೆಂಗಳೂರಿಗರ ಪಾರಂಪರಿಕ ಹಬ್ಬವಾಗಿದ್ದು, ಈ ಬಾರಿಯು ಪರಿಸರ ಸ್ನೇಹಿ ಹಬ್ಬದ ರೂಪದಲ್ಲಿ ನಡೆಯಲಿದೆ.
MUST WATCH: BENGALURU CHALO | ತಣ್ಣಗಾಗ್ತಿಲ್ಲ ಒಳಮೀಸಲಾತಿ ಹಂಚಿಕೆ ಕಿಚ್ಚು




