Karnataka: ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿ 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಕಿಟ್ (Indira Kit) ನೀಡಲು ರಾಜ್ಯ ಸರ್ಕಾರ (State Govt) ಅಧಿಕೃತ ಆದೇಶ ಹೊರಡಿಸಿದೆ.

Karnataka : ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿ ಹೊಸ ನಿರ್ಣಯ ಕೈಗೊಂಡಿದ್ದು, 5 ಕೆಜಿ ಅಕ್ಕಿಯ ಜೊತೆಗೆ ಇಂದಿರಾ ಕಿಟ್ (Indira Kit) ವಿತರಣೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ.
ಇಂದಿರಾ ಕಿಟ್ ಜೊತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ
ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ಪ್ರತಿ ಪಡಿತರ ಕಾರ್ಡ್ನಲ್ಲಿರುವ ಸದಸ್ಯರಿಗೆ ಇಂದಿರಾ ಕಿಟ್ನಲ್ಲಿ 5 ಪದಾರ್ಥಗಳು ಲಭ್ಯವಾಗಲಿವೆ. ಅವುಗಳೆಂದರೆ —
- 1 ಕೆ.ಜಿ ತೊಗರಿ
- 1 ಲೀಟರ್ ಅಡುಗೆ ಎಣ್ಣೆ
- 1 ಕೆ.ಜಿ ಸಕ್ಕರೆ
- 1 ಕೆ.ಜಿ ಉಪ್ಪು
- 1 ಕೆ.ಜಿ ಹೆಸರುಕಾಳು
₹422 ಮೌಲ್ಯದ ಇಂದಿರಾ ಕಿಟ್ ಉಚಿತ – ರಾಜ್ಯ ಸರ್ಕಾರದ ಹೊಸ ನಿರ್ಣಯ
ಈ ಕಿಟ್ನ ಒಟ್ಟು ಮೌಲ್ಯ ₹422 ಆಗಿದ್ದು, ಈ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಅದರ ಜೊತೆಗೆ, ಫಲಾನುಭವಿಗಳಿಗೆ ಹಿಂದಿನಂತೆಯೇ ಪ್ರತ್ಯೇಕವಾಗಿ 5 ಕೆ.ಜಿ ಅಕ್ಕಿಯೂ ಸಿಗಲಿದೆ, ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಮಹಿಳೆಯ ರೇಷನ್ ಕಾರ್ಡ್ ರದ್ದು ಪಡಿತರ ಚೀಟಿಗಾಗಿ ಮಹಿಳೆ ಕಣ್ಣೀರು
ಅನ್ನಭಾಗ್ಯ ಯೋಜನೆಗೆ ಪೌಷ್ಠಿಕ ಸ್ಪರ್ಶ – ಇಂದಿರಾ ಕಿಟ್ ವಿತರಣೆ ಶೀಘ್ರ ಆರಂಭ
ಸರ್ಕಾರದ ಈ ನಿರ್ಣಯದಿಂದ ಬಿಪಿಎಲ್ ಮತ್ತು ಅಂತರ್ಯೋಜನಾ ಕಾರ್ಡ್ದಾರರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಆಹಾರ ಸುರಕ್ಷತೆ ಜೊತೆಗೆ ಪೌಷ್ಠಿಕತೆಗೂ ಒತ್ತು ನೀಡುವ ಉದ್ದೇಶದಿಂದ ಇಂದಿರಾ ಕಿಟ್ ಯೋಜನೆ ಜಾರಿಗೆ ತರಲಾಗಿದೆ.
MUST WATCH: CM SIDDARAMAIAH| ಅನ್ನಭಾಗ್ಯ ಹೆಸರು ಬಂದಿದ್ದೇಗೆ?-ಎಷ್ಟು ಚೆಂದ ಹೇಳ್ತಾರೆ ಕೇಳಿ ಸಿಎಂ!




