
ಸರ್ಕಾರ ದಿಢೀರ್ ಆಗಿ ಪಡಿತರ ಚೀಟಿಯನ್ನು ಕ್ಯಾನ್ಸಲ್ ಮಾಡ್ತಾ ಇದ್ದು, ಸರ್ಕಾರದ ಕ್ರಮದಿಂದಾಗಿ ಬಡ ಕುಟುಂಬಗಳು ಕಂಗಾಲಾಗಿವೆ. ಈಗ ಮಹಿಳೆಯೊಬ್ಬರ ರೇಷನ್ ಕಾರ್ಡ್ನನ್ನು ಏಕಾಏಕಿ ರದ್ದು ಮಾಡಿದ್ದು, ಬಿಪಿಎಲ್ನಿಂದ ಎಪಿಎಲ್ಗೆ ಮಾರ್ಪಡು ಮಾಡಲಾಗಿದ್ದು, ರೇಷನ್ ಕಾರ್ಡ್ಗಾಗಿ ಮಹಿಳೆ ಅಲೆಯುತ್ತಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ತಹಶೀಲ್ದಾರ್ ಕಚೇರಿ ಮುಂದೆ ಕಣ್ಣೀರುಡುತ್ತಿರೋ ಮಹಿಳೆಯ ಹೆಸರು ರಮಾದೇವಿ ಅಂತಾ.. ಚಿಂತಾಮಣಿ ತಾಲ್ಲೂಕಿನ ಭ್ರಹ್ಮವರಂಹಳ್ಳಿಯ ನಿವಾಸಿ. ಪತಿಯನ್ನು ಕಳೆದುಕೊಂಡ ಮಹಿಳೆ ಮಗಳು, ಮೊಮ್ಮಗನೊಂದಿಗೆ ವಾಸ ಮಾಡ್ತಾ ಇದದು, ಅಂಗನವಾಡಿಯಲ್ಲಿ ಆಯಾ ಆಗಿ ಕೆಲಸ ಮಾಡ್ತಾ ಇದ್ದಾರೆ. ಅನ್ನಭಾಗ್ಯ ಯೋಜನೆಯಿಂದ ಸಿಗುವ ರೇಷನ್ನನ್ನೇ ನಂಬಿಕೊಂಡಿದ್ದ ರಮಾದೇವಿಗೆ ಅಧಿಕಾರಿಗಳು ಶಾಕ್ ನೀಡಿದ್ದು, ಏಕಾಏಕಿ ಇವರ ರೇಷನ್ ಕಾರ್ಡ್ನನ್ನು ಕ್ಯಾನ್ಸಲ್ ಮಾಡಿದ್ದು, ಮಹಿಳೆ ಕಂಗಲಾಗಿದ್ದಾರೆ.
ಕಳೆದ ಜನವರಿಯಿಂದ ಕೆಲ ತಿಂಗಳು ರೇಷನ್ ಕಾರ್ಡ್ನಿಂದ ಅಕ್ಕಿಯನ್ನು ಕೊಳ್ಳಲು ಆಗಿಲ್ಲ… ಅಲ್ದೇ ಕಳೆದ ತಿಂಗಳು ಕೂಡ ರೇಷನ್ ಕಾರ್ಡ್ನಿಂದ ಅಕ್ಕಿಯನ್ನಯ ತೆಗೆದುಕೊಳ್ಳಲಾಗಿದ್ಯಂತೆ. ಆದ್ರೆ ಈ ತಿಂಗಳು ರೇಷನ್ ತೆಗೆದುಕೊಳ್ಳಲು ಹೋದಾಗ ನಿಮ್ಮದು ಎಪಿಎಲ್ ಕಾರ್ಡ್ ಆಗಿ ಚೇಂಜ್ ಆಗಿದೆ ರೇಷನ್ ಕೊಡಲು ಆಗಲ್ಲ ಅಂತಾ ಹೇಳಿ ಕಳುಹಿಸಿದ್ದಾರೆ. ಇದ್ರಿಂದ ಕಂಗಾಲಾದ ಮಹಿಳೆ ತಹಶೀಲ್ದಾರ್ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ. ಒಂದು ತಿಂಗಳು ಬಳಿಕ ಸರಿಪಡಿಸೋದಾಗಿ ಅಧಿಕಾರಿಗಳು ಸಬೂಬು ಹೇಳಿ ಕಳುಹಿಸಿದ್ದಾರಂತೆ..
ಅದೇನೆ ಆಗಲಿ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಬದುಕುತ್ತಿರೋ ಮಹಿಳೆಗೆ ಅಧಿಕಾರಿಗಳು ಶಾಕ್ ನೀಡಿದೆ. ಮಹಿಳೆಯ ಅಳಲನ್ನು ಕೇಳಿ ಆದ್ರು ರೇಷನ್ ಕಾರ್ಡ್ ಒದಗಿಸುತ್ತಾರಾ ಎಂದು ಕಾದುನೋಡಬೇಕಿದೆ.




