Mysuru Murder : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ತಾಳಿಕಟ್ಟಿದ ಗಂಡನ ಕಥೆಯನ್ನೇ ಪತ್ನಿ ಮುಗಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Mysuru Murder : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ತಾಳಿಕಟ್ಟಿದ ಗಂಡನ ಕಥೆಯನ್ನೇ ಪತ್ನಿ ಮುಗಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಂದಿರಾನಗರ ಗ್ರಾಮದಲ್ಲಿ ನಡೆದಿದೆ. ಗಂಡ ನಿದ್ದೆಗೆ ಜಾರುತ್ತಿದ್ದಂತೆ ಮರ್ಮಾಂಗಕ್ಕೆ ಹೊಡೆದು ಕೊಂದಿದ್ದಾಳೆ. ವೀರಣ್ಣ(41) ಕೊಲೆಯಾದ ವ್ಯಕ್ತಿ. ಶಿವಮ್ಮ ಕೊಲೆ ಆರೋಪಿ.
ಅಕ್ರಮ ಸಂಬಂಧಕ್ಕೆ ಪತಿ ವಿರೋಧ
ಇವರಿಬ್ಬರಿಗೂ ಮದುವೆಯಾಗಿ 13 ವರ್ಷ ಆಗಿದ್ದು, ಮಕ್ಕಳು ಇದ್ದಾರೆ. ಆದರೆ, ಈ ಮಹಿಳೆಗೆ ಎಚ್.ಡಿ ಕೋಟೆಯ ಬಲರಾಮ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಗಂಡ ವೀರಣ್ಣನಿಗೆ ಗೊತ್ತಾದ ನಂತರ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಸಂಬಂಧಿಕರು ನ್ಯಾಯಪಂಚಾಯಿತಿ ನಡೆಸಿದ್ದರೂ, ಶಿವಮ್ಮಳ ಅಕ್ರಮ ಸಂಬಂಧ ಮುಂದುವರಿದಿತ್ತೆಂದು ತಿಳಿದುಬಂದಿದೆ.
ಇದನ್ನು ಓದಿ : Tiptur : ತಿಪಟೂರು ಜಿಲ್ಲಾಪಂಚಾಯತ್ AEE ಲೋಕಾಯುಕ್ತ ಬಲೆಗೆ
ಹತ್ಯೆ ಬಳಿಕ ಆತ್ಮಹತ್ಯೆ ನಾಟಕ
ಇನ್ನು ಈ ಕುರಿತು ವೀರಣ್ಣ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಶಿವಮ್ಮ, ಗಂಡನನ್ನು ಮುಗಿಸಲು ಪ್ಲ್ಯಾನ್ ರೂಪಿಸಿದ್ದಾಳೆ. ಮನೆಯಲ್ಲೇ ಊಟ ಮಾಡಿ ನಿದ್ರಿಸುತ್ತಿದ್ದ ಪತಿಯನ್ನು ಮರ್ಮಾಂಗಕ್ಕೆ ಹೊಡೆದು ಕೊಂದಿದ್ದಾಳೆ. ಬಳಿಕ “ಗಂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬ ನಾಟಕವಾಡಿದ್ದಾಳೆ.
ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ, ಶಿವಮ್ಮ ಕೊಲೆಯ ಸತ್ಯ ಹೊರಬಿದ್ದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನು ನೋಡಿ : Delhi Bomb Blast: ದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ- ನೋಟಮ್ ಜಾರಿ ಮಾಡಿದ ಪಾಕಿಸ್ತಾನ…!




