Chikkamagaluru: ಆಸ್ತಿಗಾಗಿ ಮಗಳೇ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.

Chikkamagaluru: ಆಸ್ತಿ ಹಂಚಿಕೆಗೆ ಸಂಬಂಧಿಸಿದ ಕಲಹದ ಹಿನ್ನೆಲೆ, ಮಗಳು ತಾಯಿಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.
ಆಸ್ತಿಗಾಗಿ ತಾಯಿಯೇ ಬಲಿ – ಮಗಳ ಕ್ರೂರ ಕೃತ್ಯ
ಮೃತ ಮಹಿಳೆ ಕುಸುಮ (62) ಎಂದು ಗುರುತಿಸಲಾಗಿದ್ದು, ಆರೋಪಿಯಾಗಿ ಆಕೆಯ ಸಾಕು ಮಗಳು ಸುಧಾ (35) ಬಂಧಿತೆಯಾಗಿದ್ದಾಳೆ.
ಆಸ್ತಿಗಾಗಿ ಸಾಕು ಮಗಳು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ
ಆರಂಭದಲ್ಲಿ ಸುಧಾ ತಾಯಿ ಕುಸುಮ ರಾತ್ರಿ ಮಲಗಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ಕಥೆ ಕಟ್ಟಿದ್ದಳು. ಆದರೆ, ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ಮುಂದುವರೆಸಿದಾಗ ಆಕೆ ತಾನೇ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಕಲಬುರಗಿಯಲ್ಲಿ ತಂದೆ ಮೇಲಿನ ದ್ವೇಷಕ್ಕೆ ಮಗಳ ಭೀಕರ ಹತ್ಯೆ!
ಬಾಳೆಹೊನ್ನೂರಿನ ಬಂಡಿಮಠದಲ್ಲಿ ಘಟನೆ
ಮೂಲತಃ ಹಾವೇರಿ ಜಿಲ್ಲೆಯವರು ಆಗಿದ್ದ ಕುಸುಮ, ಹಲವು ವರ್ಷಗಳಿಂದ ಬಾಳೆಹೊನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ, ತಂಗಿಯ ಮಗಳು ಸುಧಾ ಅವರನ್ನು ಸಾಕಿಕೊಂಡು ತಮ್ಮ ಮಗಳಂತೆ ನೋಡಿಕೊಂಡಿದ್ದರು.
ಜಮೀನು ಹಾಗೂ ಮನೆ ಕೈತಪ್ಪಬಹುದು ಎಂಬ ಭಯಕ್ಕೆ ಕೊಲೆ
ಆದರೆ, ಹಾವೇರಿಯಲ್ಲಿರುವ ಒಂದೂವರೆ ಎಕರೆ ಜಮೀನು ಮತ್ತು ಒಂದು ಮನೆ ತನ್ನ ಕೈತಪ್ಪಬಹುದು ಎಂಬ ಭಯದಿಂದ ಸುಧಾ, ರಾತ್ರಿ ಮಲಗಿದ್ದ ತಾಯಿಯ ಮುಖಕ್ಕೆ ತಲೆಯ ದಿಂಬು ಒತ್ತಿ ಉಸಿರುಗಟ್ಟಿಸಿ ಕೊಲೆಗೈದಿದ್ದಾಳೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಆರೋಪಿ ಬಂಧಿಸಿದ ಬಾಳೆಹೊನ್ನೂರು ಪೊಲೀಸರು
ಸದ್ಯ ಬಾಳೆಹೊನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH: ಹಾಡಹಗಲೇ ಭೀಕರ ಕೊಲೆ-ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದ ಪಾತಕಿ




