Bus Accident : ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ಭೀಕರ ರಸ್ತೆ ಅಪಘಾತ ರಾಯಚೂರಿನಲ್ಲಿ ಸಂಭವಿಸಿದೆ.

Bus Accident : ಹೊಸಪೇಟೆಯಿಂದ ಹೈದ್ರಾಬಾದ್ ಕಡೆ ಪ್ರಯಾಣಿಸುತ್ತಿದ್ದ ಕೆಕೆಆರ್ ಟಿಸಿ ಸ್ಲೀಪರ್ ಕೋಚ್ ಬಸ್ ನೆನ್ನೆ ರಾತ್ರಿ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿದೆ. ಈ ಭೀಕರ ಬಸ್ ಪಲ್ಟಿಯಲ್ಲಿ ಸುಮಾರು 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತ ಹೇಗೆ ಸಂಭವಿಸಿದೆ?
ಚಾಲಕನ ನಿಯಂತ್ರಣ ತಪ್ಪಿ, ಬಸ್ ರಸ್ತೆ ಪಕ್ಕದ ಬಾಂಡ್ ಗಲ್ಲಿಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ದುರಂತದಲ್ಲಿ ಒಬ್ಬ ಪ್ರಯಾಣಿಕನ ಕಾಲು ಮುರಿದಿದ್ದು, ಉಳಿದವರಿಗೂ ಗಂಭೀರ ಗಾಯಗಳಾಗಿವೆ.
ಇದನ್ನು ಓದಿ : Bengaluru : ಫ್ಯಾನ್ಗೆ ನೇಣು ಬಿಗಿದುಕೊಂಡು 16 ವರ್ಷದ ಬಾಲಕಿ ಆತ್ಮಹತ್ಯೆ
ತಕ್ಷಣದ ಸಹಾಯ ಮತ್ತು ಚಿಕಿತ್ಸೆ
ಇನ್ನು ಘಟನೆಯ ತಕ್ಷಣ ಸ್ಥಳೀಯರು ಸಹಾಯಕ್ಕೆ ಧಾವಿಸಿದರು. ಇನ್ನು ಗಾಯಾಳುಗಳನ್ನು ತಕ್ಷಣ ರಾಯಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ತನಿಖೆ ಆರಂಭ
ಘಟನೆದ ನಂತರ ರಾಯಚೂರು ಗ್ರಾಮೀಣ ಪೊಲೀಸ್ ಸ್ಥಳಕ್ಕೆ ಆಗಮಿಸಿ, ಅಪಘಾತದ ವಿವರ, ಗಾಯಾಳುಗಳ ಸಂಖ್ಯೆ ಮತ್ತು ಕಾರಣಗಳನ್ನು ಪರಿಶೀಲಿಸಿದ್ದಾರೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದನ್ನು ನೋಡಿ : Jail: ಜೈಲಲ್ಲಿ ಐಸಿಸ್ ಉಗ್ರರಿಗೆ ಮೊಬೈಲ್, ಹೈಫೈ ಸೌಲಭ್ಯ: ಅಮಿತ್ ಶಾ, ಎನ್ಐಎಗೆ ವಿಶೇಷ ದೂರು! ಎಂಟ್ರಿಯಾಗುತ್ತಾ ಕೇಂದ್ರ




