
PAVAGADA NEWS : ಪಾವಗಡ ತಾಲೂಕಿನಲ್ಲಿ ಅಧಿಕಾರಿಗಳಿಗೆ ಗ್ರಾಮಗಳ ಅಭಿವೃದ್ಧಿ ಮಾಡುವ ಮನಸ್ಸೆ ಇಲ್ಲವೇನೋ ಎನ್ನಿಸುತ್ತಿದೆ. ಶಾಸಕ ಹೆಚ್.ವಿ.ವೆಂಕಟೇಶ್ ಅವರೇ ನೀವು ಒಮ್ಮೆ ಈ ಸುದ್ದಿಯನ್ನು ನೋಡಿ ಬಿಡಿ. ನಿಮ್ಮ ತಾಲೂಕಿನ ಬಹುತೇಕ ಗ್ರಾಮಗಳ ಸಮಸ್ಯೆಗಳ ಕುರಿತಾಗಿ ನಿಮ್ಮ ಪ್ರಜಾಶಕ್ತಿ ಬೆಂಬಿಡದೆ ಸುದ್ದಿ ಯನ್ನು ಮಾಡುತ್ತಿದೆ. ಆದ್ರೆ, ಅದ್ಯಾಕೋ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಮೊಂಡುತನವನ್ನು ತೋರಿಸು ತ್ತಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ಅನೇಕ ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಇತ್ತ ಪಾವಗಡದ ಹೃದಯ ಭಾಗದಲ್ಲಿಯೇ ಇರುವ 19 ನೇ ವಾರ್ಡ್ ನ ಜನರು ಗೋಳು ಕೇಳೋರೆ ಇಲ್ಲ. ರಸ್ತೆ ಇಲ್ಲದೆ ಜನ ಓಡಾಡಲು ಪರದಾಡುತ್ತಿದ್ದಾರೆ. ನಮಗೆ ಓಡಾಡಲು ರಸ್ತೆಯನ್ನು ಹುಡುಕಿಕೊಡಿ ಎಂದು ಪ್ರಜಾಶಕ್ತಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡ್ರು.
ಪಾವಗಡದ ಗ್ರಾಮಗಳ ಕಥೆ ಒಂದು ತರವಾದ್ರೆ, ನಗರದ ಹಲವು ವಾರ್ಡ್ ಗಳಲ್ಲಿಯೂ ಇಂದಿಗೂ ಹಲವರು ಸಮಸ್ಯೆಗಳು ಜ್ವಲಂತ ಸಮಸ್ಯೆಗಳಾಗಿಯೇ ಉಳಿದುಕೊಂಡಿವೆ. ಇತ್ತ ಹೃದಯಭಾಗದ 19ನೇ ವಾರ್ಡ್ನಲ್ಲಿ ಬರುವ ಶಾರದಾ ವಿದ್ಯಾಪೀಠ ಶಾಲೆಯ ಮುಂಭಾಗದಲ್ಲಿರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಬಿಡಲು ಬರುತ್ತಾರೆ. ಆದ್ರೆ ರಸ್ತೆ ವ್ಯವಸ್ಥೆ ಸರಿ ಇರದೆ ಪರದಾಡುವಂತಾಗಿದೆ. ಇತ್ತ ಈ ರಸ್ತೆ ಸಮಸ್ಯೆ ಬಗೆಹರಿಸುವಂತೆ ಅದೆಷ್ಟೇ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ. ಪುರಸಭೆಯ ಅಧ್ಯಕ್ಷರ ಗಮನಕ್ಕೂ ತಂದಿದ್ರು ಏನು ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಭಾಗದಲ್ಲಿ ಮೂರ್ನಾಲ್ಕು ಶಾಲೆಗಳು ಇದ್ದು ಪ್ರತಿ ದಿನ ಸಾವಿರಾರು ಮಕ್ಕಳು ಓಡಾಡುವ ರಸ್ತೆ ಇದಾಗಿದೆ. ಶಾಲೆಗೆ ಬಿಡಲು ಬರುವ ಪೋಷಕರು ಪ್ರತಿದಿನ ಬಿದ್ದು ಏಳುವ ಪರಿಸ್ಥಿತಿ. ರಸ್ತೆ ಸರಿಪಡಿಸಲು ಸಹ ಆಗದ ಅನುದಾನ ಇಲ್ಲವೇ ಪುರಸಭೆಯಲ್ಲಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ರಸ್ತೆಯ ಮೇಲೇಯೇ ಚರಂಡಿ ನೀರು ಕೂಡ ಹರಿತ್ತಿದ್ದು, ಸಾಂಕ್ರಾಮಿಕ ರೋಗಗಳ ತಾಣವಾಗುತ್ತಿದೆ ವಾರ್ಡ್. ಅತ್ತ ಸ್ವಲ್ಪ ದೂರ ರಸ್ತೆ ಏನೋ ಇದೆ. ಆದ್ರೆ ಅದು ಕೂಡ ನೆಟ್ಟಗಿಲ್ಲ, ಹಳ್ಳಗಳಿಂದ ತುಂಬಿ ತುಳು ಕುತ್ತಿದೆ. ಕೂಡಲೇ ಸಂಬಂಧಪಟ್ಟ ಪುರಸಭಾ ಅಧಿಕಾರಿಗಳು ಇತ್ತ ಗಮನಹರಿಸಿ, ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಬೇಕಾಗಿದೆ.




