
Arasikere : ವೀರಶೈವ ರುದ್ರಭೂಮಿ ಅಭಿವೃದ್ಧಿಗೆ ಗಮನ ಹರಿಸದಿದ್ದರೆ, ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಭಿಕ್ಷಾಟನೆ ಮಾಡಿ ರುದ್ರ ಭೂಮಿಯನ್ನು ಅಭಿವೃದ್ದಿ ಮಾಡಬೇಕಾಗುತ್ತದೆ. ಅರಸೀಕೆರೆ ತಾಲ್ಲೂಕಿನಲ್ಲಿ ಅತಿ ದೊಡ್ಡ ಸಮಾಜ ಎಂದರೆ ವೀರಶೈವ ಲಿಂಗಾಯತ ಸಮಾಜ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಅಂತಹ ಸಮಾಜದ ರುದ್ರಭೂಮಿ ಕಳೆದ 15 ವರ್ಷಗಳಿಂದ ಅಭಿವೃದ್ಧಿ ಕಾಣದೆ ಇರುವುದು ಕಂಡು ಬಂದಿದೆ ಎಂದು ವೀರಶೈವ ಸಮಾಜದ ಮುಖಂಡ ರಮೇಶ್ ತಿಳಿಸಿದರು.
ಹೌದು.. ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿ ಸಮೀಪ ಇರುವ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಮೂಲಭೂತ ಸೌಕರ್ಯಗಳು ವಂಚಿತಗೊಂಡಿದೆ. ರುದ್ರ ಬಹುಮತ ಬರುವ ವಾಹನಗಳಿಗೂ ಸರಿಯಾದ ರಸ್ತೆ ಇಲ್ಲ. ಅಂತ್ಯ ಸಂಸ್ಕಾರಕ್ಕೆ ಬರುವ ಜನರಿಗೆ ಕುಡಿಯುವ ನೀರು ಮತ್ತು ರುದ್ರಭೂಮಿ ಸುತ್ತ ಕಾಂಪೌಂಡ್ ಇಲ್ಲ. ಸಮಾಜದ ಬಾಂಧವರಲ್ಲಿಕೇಳಿಕೊಳ್ಳುವುದೇನೆಂದರೆರಾಜಕಾರಣ ವರ್ತುಪಡಿಸಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆಗಳಲ್ಲಿ ಭಿಕ್ಷಾಟನೆ ಮಾಡಿ, ರುದ್ರ ಭೂಮಿಯನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಮುಖಂಡ ಹಾರನಹಳ್ಳಿ ರಾಜು, ಎಂ. ಟಿ . ಎಸ್ ಮಧು , ದಯಾನಂದ್ ಹಾಜರಿದ್ದರು.




