Channapatna ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಬಂದ ಕಾಡಾನೆಗಳು ಬಾಳೆ ಹಾಗೂ ಪಪ್ಪಾಯ ಬೆಳೆ ಹಾನಿಗೊಳಪಡಿಸಿ ಮರಳಿ ಕಾಡಿಗೆ ತೆರಳಿವೆ.

Channapatna : ರಾತ್ರಿವೇಳೆ ಮನೆ ಬಾಗಿಲಿಗೆ ಬಂದ ಕಾಡಾನೆಗಳನ್ನು ನೋಡಿ ಮನೆ ಮಾಲೀಕ ಬೆಚ್ಚಿಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದು, ಕಾಡಾನೆಗಳ ಹಾವಳಿ ಮತ್ತೆ ಚರ್ಚೆಗೆ ಕಾರಣವಾಗಿದೆ. ಗ್ರಾಮದ ನಿವಾಸಿ ದೊಡ್ಡೇಗೌಡ ಎಂಬುವವರ ಮನೆ ಬಳಿ ಎರಡು ಕಾಡಾನೆಗಳು ಪ್ರತ್ಯಕ್ಷಗೊಂಡಿವೆ.
ಅವು ಮನೆಯ ಕಾಂಪೌಂಡ್ ಒಳಗೆ ಬೆಳೆದಿದ್ದ ಬಾಳೆ ಹಾಗೂ ಪಪ್ಪಾಯ ಬೆಳೆಗಳನ್ನು ತಿಂದು ದಾಂಧಲೆ ನಡೆಸಿ, ಬಳಿಕ ಮತ್ತೆ ಕಾಡಿನತ್ತ ಮರಳಿವೆ.ಈ ಘಟನೆ ಕೆಲಕಾಲ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು.
MUST READ : ಬೆಂಗಳೂರು-ಪುಣೆಗೆ ಬರುತ್ತಿದೆ ‘ Vande Bharat Sleeper ’..!!
ಅರಣ್ಯ ಪ್ರದೇಶದಿಂದ ನಿತ್ಯ ಜನವಸತಿ ಕಡೆಗೆ ಕಾಡಾನೆಗಳ ಆಗಮನ
ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಕಾಡಾನೆಗಳು ನಿತ್ಯ ಜನವಸತಿ ಪ್ರದೇಶಕ್ಕೆ ಬರುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರಿಂದ ರೈತರ ಬೆಳೆ ನಾಶವಾಗುವುದರ ಜೊತೆಗೆ ಮನೆಗಳಿಗೆ ಹಾನಿಯಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೋ ಸೆರೆಹಿಡಿದು ಅರಣ್ಯ ಇಲಾಖೆಗೆ ದೂರು
ಕಾಡಾನೆಗಳು ಮನೆ ಬಳಿ ಬಂದು ದಾಂಧಲೆ ನಡೆಸಿದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ನಂತರ ಆ ವೀಡಿಯೋ ಸಹಿತ ಅರಣ್ಯ ಇಲಾಖೆಗೆ ದೂರು ನೀಡಿ, ಕಾಡಾನೆಗಳ ಹಾವಳಿ ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
MUST WATCH : ಸಿದ್ದು ಟೀಂ ಡಿಕೆ ಟೀಂ ಅಂತಾ ಏನು ಇಲ್ಲ ಡಿಕೆ ಒಗ್ಗಟ್ಟಿನ ಮಂತ್ರ ಹೇಳ್ತಾ ಇರೋದ್ಯಾಕೆ




