Tiger Attack In Mysuru: ಮೈಸೂರು ಜಿಲ್ಲೆಯಲ್ಲಿ ಮತ್ತೇ ರೈತನ ಹುಲಿ ದಾಳಿ ನಡೆಸಿರುವ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಹುಲಿ ದಾಳಿಗೆ ಮೂರನೇ ಬಲಿಯಾಗಿದೆ.

Tiger Attack In Mysuru: ಮೈಸೂರು ಜಿಲ್ಲೆಯಲ್ಲಿ ರೈತನ ಮೇಲೆ ಮತ್ತೆ ಹುಲಿ ದಾಳಿ ನಡೆಸಿದೆ. ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೇ ಹೆಗ್ಗೂಡಿಲು ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಹುಲಿ ದಾಳಿಯಲ್ಲಿ ಮತ್ತೊಬ್ಬ ರೈತ ಮೃತಪಟ್ಟ ಘಟನೆ ಆತಂಕ ಉಂಟು ಮಾಡಿದೆ. ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಇದು ಮೂರನೇ ಹುಲಿ ದಾಳಿಯಾಗಿದ್ದು, ರೈತರ ಸಾವಿನ ಸಂಖ್ಯೆ ಮೂರುಕ್ಕೇರಿದೆ.
ಜಮೀನಿನಲ್ಲಿ ಉಳುಮೆ ವೇಳೆ ದಾಳಿ
ಮೃತರನ್ನು ದಂಡನಾಯಕ (52) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಏಕಾಏಕಿ ಹುಲಿ ದಾಳಿ ಮಾಡಿದೆ. ದಾಳಿ ಬಳಿಕ ಹುಲಿ ಮೃತದೇಹವನ್ನು ಸುಮಾರು ಅರ್ಧ ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿ, ತಲೆ ಮತ್ತು ತೊಡೆ ಭಾಗ ತಿಂದಿರುವುದು ಕಂಡುಬಂದಿದೆ. ಈ ಘಟನೆ ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ: MYSURU: ಮೈಸೂರಿನಲ್ಲಿ ಮತ್ತೆ ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ..!
ಗ್ರಾಮಸ್ಥರಲ್ಲಿ ಹೆಚ್ಚಿದ ಭೀತಿ..!
ಒಂದು ತಿಂಗಳೊಳಗೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳಲ್ಲಿ ನಾಲ್ಕು ಹುಲಿ ದಾಳಿ ಪ್ರಕರಣಗಳು ವರದಿಯಾಗಿವೆ. ನಿರಂತರ ದಾಳಿಗಳಿಂದ ಸ್ಥಳೀಯರು ಭೀತಿಗೊಳಗಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರಿಂದ ಅರಣ್ಯ ಅಧಿಕಾರಿಗಳ ಮೇಲೆ ಆಕ್ರೋಶ
ಹುಲಿ ದಾಳಿಯ ನಂತರ ಘಟನಾ ಸ್ಥಳಕ್ಕೆ ಬಂದಿದ್ದ ಸರಗೂರು ಅರಣ್ಯ ವಲಯ ಅಧಿಕಾರಿ (RFO) ಅಮೃತಾ ಅವರ ಮೇಲೆ ಗ್ರಾಮಸ್ಥರು ಆಕ್ರೋಶ ತೋರಿಸಿ ಹಲ್ಲೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ.
ಅಧಿಕಾರಿಗಳ ಕ್ರಮ
ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನುಗು ವನ್ಯಜೀವಿಧಾಮದ ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಗೆ ಪಂಜರಗಳು ಮತ್ತು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.
MUST WATCH: CHEETAH ATTACK | ರಾತ್ರಿ ಹೊತ್ತಿನ ಚಿರತೆ ದಾಳಿ – ಚಿರತೆ ಹಾವಳಿಗೆ ಬೆಚ್ಚಿಬಿದ್ದ ಗ್ರಾಮಸ್ಥರು




