
ಶಿರಾ:
ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಲಾಗುತ್ತಿದೆ. ಇತ್ತ ವಿಸರ್ಜನೆ ವೇಳೆ ಹಲವು ಕಡೆ ಅವಘಡಗಳು ಸಂಭವಿಸಿದ್ದವು. ಡಿಜೆ ವಿಚಾರವಾಗಿ ರಾಜ್ಯಾದ್ಯಂತ ಜನರು ಮೆರವಣಿಗೆ ವೇಳೆ ಡಿಜೆ ಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇತ್ತ ತುಮಕೂರು ಜಿಲ್ಲೆಯಾದ್ಯಂತಲೂ ಕೂಡ ಡಿಜೆ ಬೇಕೆ ಬೇಕು ಎಂದು ಭಕ್ತರು ಹಠ ಮಾಡುತ್ತಿದ್ದರು. ಆದ್ರೆ ಎಸ್ ಪಿ ಅಶೋಕ್ ಡಿಜೆ ಗೆ ಅವಕಾಶವಿಲ್ಲವೆಂದು ಖಡಕ್ ಎಚ್ಚರಿಕೆ ನೀಡಿದ್ರು. ಇನ್ನು ನಾಳೆ ಶಿರಾದಲ್ಲಿಯೂ ಹಿಂದೂ ಮಹಾಗಣಪತಿ ವಿಸರ್ಜನೆ ಇರುವುದರಿಂದ ಎಸ್ ಪಿ ಅಶೋಕ್ ಡಿಜೆ ಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಶಿರಾ ನಗರದಲ್ಲಿ 9ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಸಿದ್ಧತೆ ಕೈಗೊಂಡಿದ್ದು, ಇದೇ ಕಾರಣಕ್ಕೆ ಎಸ್ ಪಿ ಅಶೋಕ್ ಶಿರಾದಲ್ಲಿ ಸುದ್ದಿಗೋಷ್ಠಿ ನಡೆಸಿ ಹಿಂದೂ ಮಹಾಗಣಪತಿ ಆಯೋಜಕರೊಂದಿಗೆ ಚರ್ಚೆ ನಡೆಸಿದ್ರು. ಡಿಜೆಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ, ಖಡಕ್ ಎಚ್ಚರಿಕೆಯನ್ನು ನೀಡಿದ್ರು. ನಗರದ ಶ್ರೀ ಗವಿ ಆಂಜನೇಯ ದೇವಸ್ಥಾದಿಂದ ನಗರದ ರಾಜ ಬೀದಿಗಳ ಮೂಲಕ ಬೃಹತ್ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಕಾರ್ಯಕ್ರಮದ ಏರ್ಪಡಿಲಾಗಿದೆ. ಆದರೆ, ಈ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಅವಕಾಶವಿಲ್ಲ ಎಂದರು.

ಹಿಂದೂಮಹಾಸಭಾ ಗಣಪತಿ ಶೋಭಾ ಯಾತ್ರೆಗೆ ಸುಪ್ರೀಂಕೋರ್ಟ್ ಆದೇಶದಂತೆ ಯಾವುದೇ ಕಾರಣಕ್ಕೂ ಡಿಜೆ ಬಳಸಲು ಅವಕಾಶ ನೀಡಲ್ಲ, ಕಲಾತಂಡಗಳಿಗಾಗಿ 2 ಧ್ವನಿವರ್ಧಕಗಳ ಬಳಕೆಗೆ ಅನುಮತಿ ಮಾತ್ರ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. ಮೆರವಣಿಗೆ ನಡೆಯುವ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಮೆರವಣಿಗೆ ದೃಶ್ಯಗಳನ್ನು ವಿಡಿಯೋ, ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗುತ್ತದೆ. ಆ ದಿನ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.




