
BANGALORE : ಬೆಂಗಳೂರು ನಗರದ ವೈಟ್ಫೀಲ್ಡ್ ಪ್ರದೇಶದಲ್ಲಿರುವ ಕೋ-ಲಿವಿಂಗ್ ಪಿಜಿಯಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಸಂಬಂಧಕ್ಕೆ ಒಪ್ಪದಿದ್ದ ಕಾರಣ ಚಾಕು ಇರಿದ ಘಟನೆ ನಡೆದಿದೆ.
ಆರೋಪಿಯನ್ನು ಬಾಬು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ (Techie) ಆಗಿದ್ದು, ಮದುವೆಯಾಗಿ ಮಗುವಿದೆ. ಪತ್ನಿ ಮತ್ತು ಕುಟುಂಬದಿಂದ ದೂರವಿದ್ದು, ಒಬ್ಬನೇ ಪಿಜಿಯಲ್ಲಿ ವಾಸವಿದ್ದ ಎನ್ನಲಾಗಿದೆ. ಇನ್ನು ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಬಂದು ವಾಸವಿದ್ದ ಯುವತಿಗೆ ಪರಿಚಯ ಮಾಡಿಕೊಂಡು, ಆಕೆಯ ಮೊಬೈಲ್ ನಂಬರ್ ಪಡೆದು ಸ್ನೇಹ ಬೆಳೆಸಿದ್ದ, ಕೆಲ ದಿನಗಳ ಹಿಂದೆ ಲೈಂಗಿಕ ಸಂಬಂಧಕ್ಕೆ ಒತ್ತಾಯ ಮಾಡಿದ್ದು, ಯುವತಿ ನಿರಾಕರಿಸಿದ ನಂತರ, ಅವಳ ಖಾಸಗಿ ಫೋಟೋಗಳು ಹಂಚಿಕೊಳ್ಳುವ ಬೆದರಿಕೆ ಹಾಕಿ ಆಕೆಗೆ ₹70,000 ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಇನ್ನು ಯುವತಿ ಸ್ನೇಹಿತರ ಬಳಿ ಸಾಲ ಪಡೆದು ಹಣ ಕೊಡುತ್ತೀನಿ ಎಂದಿದ್ದಾಳೆ. ಆದರೆ ಆರೋಪಿ ಆಕೆಯ ಫೋನ್ ಪಡೆದು ₹14,000 ತನ್ನ ಖಾತೆಗೆ ವರ್ಗಾಯಿಸಿಕೊಂಡು, ಬಳಿಕ ಗಲಾಟೆ ಮಾಡಿ, ಚಾಕುವಿನಿಂದ ಯುವತಿಯ ಬೆನ್ನಿಗೆ ಇರಿದು ಪರಾರಿಯಾಗಿದ್ದಾನೆ.
ಇನ್ನು ಗಾಯಗೊಂಡ ಯುವತಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.




