
ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಇಶಾನಿ ಅವರ ಬರ್ತ್ಡೇ ಪಾರ್ಟಿ ಕಳೆದ ರಾತ್ರಿ ಅದ್ದೂರಿಯಾಗಿ ನಡೆಯಿತು. ರಾಕ್ಸ್ಟಾರ್ ಇಮೇಜ್ ಹೊಂದಿರುವ ಇಶಾನಿ, ಈ ಬಾರಿ ಕಿತ್ತಳೆ ಬಣ್ಣದ ಔಟ್ಫಿಟ್ನಲ್ಲಿಸಖತ್ ಮಿಂಚಿದ್ರು.
ಇನ್ನು ಇಶಾನಿ ಅವರ ಬರ್ತ್ಡೇ ಪಾರ್ಟಿಗೆ ಬಿಗ್ಬಾಸ್ ಖ್ಯಾತಿಯ ವಿನಯ್, ತನಿಷಾ, ಪವಿ, ಸ್ನೇಹಿತ್, ನೀತು ಸೇರಿದಂತೆ ಹಲವು ಹಳೆಯ ಸ್ಪರ್ಧಿಗಳು ಮತ್ತು ಫ್ಯಾನ್ಸ್ಗಳು ಆಗಮಿಸಿ ಜನ್ಮದಿನದ ಶುಭಾಶಯಗಳನ್ನ ತಿಳಿಸಿದ್ದಾರೆ. ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಇಶಾನಿ ಆಚರಿಸಿದರು.
ಇಶಾನಿ ಇತ್ತೀಚೆಗೆ ಹೊಸ ಆಲ್ಬಂ ಸಾಂಗ್ ಹಾಡಿದ್ದಾರೆ. “ಸ್ವೇ (Sway)” ಎಂಬ ಟೈಟಲ್ನಿಂದ ರಿಲೀಸ್ ಆಗಿರುವ ಈ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೋಲ್ಡ್ ಫೋಟೋ ಶೂಟ್ಗಳ ಮೂಲಕ ಸದ್ದು ಮಾಡಿದ್ದ ಇಶಾನಿ, ತಮ್ಮ ಸಂಗೀತದ ಮೂಲಕವೂ ಪ್ರಭಾವ ಬೀರುತ್ತಿದ್ದಾರೆ.
ಇಶಾನಿ ಅವರ ಹುಟ್ಟೂರು ಮೈಸೂರು. ಆದರೆ ಬಾಲ್ಯದಿಂದಲೆ ದುಬೈನಲ್ಲಿ ಬೆಳೆದ ಇಶಾನಿ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಈಗಾಗಲೇ 16ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ ಅವರು ಲಿರಿಕ್ಸ್ ಕೂಡಾ ತಾವೆ ಬರೆದಿದ್ದಾರೆ.





