BBK : ಬಿಗ್ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೇ ಗಿಲ್ಲಿ–ಕಾವ್ಯ ಜೋಡಿ ಪ್ರೇಕ್ಷಕರ ಗಮನ ಸೆಳೆದ ಜೋಡಿಯಾಗಿದೆ.

BBK 12 : ಬಿಗ್ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೇ ಗಿಲ್ಲಿ–ಕಾವ್ಯ ಜೋಡಿ ಪ್ರೇಕ್ಷಕರ ಗಮನ ಸೆಳೆದ ಜೋಡಿಯಾಗಿದೆ. ಆರಂಭದಿಂದಲೂ ಇವರ ಸ್ನೇಹ, ನಗು–ಜೋಕ್ಗಳು, ಹಾಗೂ ಪರಸ್ಪರದ ಬೆಂಬಲವೇ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿವೆ. ಆದರೆ ಈಗ ಈ ಜೋಡಿ ನಿಜವಾದ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.
ಈ ವಾರ ಬಿಗ್ಬಾಸ್ನಲ್ಲಿ ಟಾಸ್ಕ್ಗಳಿಲ್ಲ – ಸ್ಪರ್ಧಿಗಳ ಗೊಂದಲ ಹೆಚ್ಚಾಗಿದೆ
ಈ ವಾರ ಬಿಗ್ಬಾಸ್ನಲ್ಲಿ ಯಾವುದೇ ಟಾಸ್ಕ್ಗಳಿಲ್ಲದ ಕಾರಣ, ಸ್ಪರ್ಧಿಗಳು ತಮ್ಮನ್ನು ನಾಮಿನೇಷನ್ನಿಂದ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ಎಪಿಸೋಡ್ನಲ್ಲಿ ಧನುಷ್ ತಮ್ಮ ಮನೆಯಿಂದ ಬಂದ ಪತ್ರದ ಬದಲಿಗೆ ಅಭಿಷೇಕ್ ಪತ್ರವನ್ನು ಆಯ್ಕೆ ಮಾಡಿ ಅವರನ್ನು ಸೇಫ್ ಮಾಡಿದ್ದರು. ಅದೇ ತರದ ಸನ್ನಿವೇಶ ಈಗ ಗಿಲ್ಲಿ–ಕಾವ್ಯ ನಡುವೆ ರೂಪುಗೊಂಡಿದೆ.
ಇದನ್ನು ಓದಿ : ಇನ್ಮುಂದೆ ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆ ಬಿಸಿಯೂಟ!?
ಬಿಗ್ಬಾಸ್ನ ಹೊಸ ಟ್ವಿಸ್ಟ್ – ಪತ್ರದ ಪರೀಕ್ಷೆ!
ಇಬ್ಬರನ್ನೂ ಕರೆದಿರುವ ಬಿಗ್ಬಾಸ್ ಗಿಲ್ಲಿಯ ಎದುರು ಕಾವ್ಯ ಮನೆಯಿಂದ ಬಂದ ಪತ್ರವನ್ನೂ ಕಾವ್ಯಳ ಎದುರು ಗಿಲ್ಲಿ ಮನೆಯಿಂದ ಬಂದ ಪತ್ರವನ್ನೂ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಪತ್ರವನ್ನು ಎತ್ತಿಕೊಂಡು ಹೋಗಬಹುದು ಅಥವಾ ಅಲ್ಲೇ ಬಿಟ್ಟೂ ಹೋಗಬಹುದು ಅನ್ನೋ ಅಪ್ಶನ್ ಬೇರೆ ಕೊಟ್ಟಿದ್ದಾರೆ.

ಪತ್ರ ಎತ್ತಿಕೊಂಡು ಹೋದರೆ ಯಾರ ಪತ್ರ ತೆಗೆದುಕೊಂಡು ಹೋಗಿದ್ದಾರೋ ಅವರು ಸೇಫ್ ಆಗುತ್ತಾರೆ. ಯಾರ ಪತ್ರ ಉಳಿಯುತ್ತದೆಯೋ ಅವರು ನಾಮಿನೇಟ್ ಆಗಿಯೇ ಉಳಿಯುತ್ತಾರೆ.
ಗಿಲ್ಲಿಗೆ ಕಾವ್ಯ ತನ್ನ ಮೇಲಿಟ್ರುಟಿವ ನಂಬಿಕೆಯನ್ನು ಉಳಿಸಬೇಕೆಂಬ ತವಕ
ಗಿಲ್ಲಿಗೆ ಕಾವ್ಯ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಬೇಕೆಂಬ ತವಕ, ಆದರೆ ಕಾವ್ಯ ತಾನು ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾರೆ. ಇಬ್ಬರಲ್ಲೊಬ್ಬರು ತೀರ್ಮಾನ ತೆಗೆದುಕೊಳ್ಳಲೇಬೇಕು . ಗಿಲ್ಲಿ ಕಾವ್ಯಳ ಮೇಲಿಟ್ಟಿರೋ ನಂಬಿಕೆ ಕಾವ್ಯ ಗಿಲ್ಲಿ ಮೇಲೆ ಇಟ್ಟಿರೋ ಸ್ನೇಹ ಉಳಿಯುತ್ತಾ? ನೋಡಿ ಬಿಗ್ಬಾಸ್ನಲ್ಲಿ.
ಇದನ್ನು ನೋಡಿ : ಗಿಲ್ಲಿ ಕಾವ್ಯ ಸ್ನೇಹಕ್ಕೂ ಅಗ್ನಿಪರೀಕ್ಷೆ.. ಇಕ್ಕಟ್ಟಿಗೆ ಸಿಲುಕಿದ ಸ್ಪರ್ಧಿಗಳು..!




