Bisiyuta : ಮಕ್ಕಳ ದಿನಾಚರಣೆಗೆ ಪಿಯು ವಿದ್ಯಾರ್ಥಿಗಳಿಗೂ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ.

Mid-Day Meal For PUC Students : ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸೀಮಿತವಾಗಿರುವ ಮಧ್ಯಾಹ್ನದ ಬಿಸಿಯೂಟ (Bisiyuta) ಯೋಜನೆ ಇನ್ಮುಂದೆ ಪಿಯುಸಿ (PUC) ವಿದ್ಯಾರ್ಥಿಗಳಿಗೂ ವಿಸ್ತಾರವಾಗಬಹುದು. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರವು ಈ ಕುರಿತಾಗಿ ಮಹತ್ವದ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
PUC ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಮಾಹಿತಿ
ಮೂಲಗಳ ಪ್ರಕಾರ, ಪಿಯು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಊಟ ಪಡೆಯುವ ಅವಕಾಶ ನೀಡುವ ಯೋಜನೆ ಸರ್ಕಾರ ಪರಿಗಣಿಸುತ್ತಿದೆ. ಸದ್ಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಲಭ್ಯವಿದೆ. ಹೊಸ ವಿಸ್ತರಣೆಯು ಪಿಯು ಕಾಲೇಜು ವಿದ್ಯಾರ್ಥಿಗಳ ದಿನಚರ್ಯೆಗೆ ಸಹಾಯವಾಗಲಿದೆ.
ಇದನ್ನು ಓದಿ : RCB ತಂಡಕ್ಕೆ ಹೊಸ ಕೋಚ್ ನೇಮಕ
ಮಕ್ಕಳ ದಿನಾಚರಣೆ: ಗುಡ್ ನ್ಯೂಸ್ ಘೋಷಣೆ
ನವೆಂಬರ್ 14ರಂದು ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಈ ಯೋಜನೆಯ ವಿಸ್ತರಣೆಯ ಬಗ್ಗೆ ಸರ್ಕಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
PUC ವಿದ್ಯಾರ್ಥಿಗಳ ಪ್ರಮಾಣ ಮತ್ತು ಅಗತ್ಯ
ರಾಜ್ಯದಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸರ್ಕಾರಿ ಪಿಯು ವಿದ್ಯಾರ್ಥಿಗಳು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದೂರದ ಊರುಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ ದೊರಕಿದರೆ ಬಹಳಷ್ಟು ಸಹಾಯಕವಾಗಲಿದೆ.
ಇದನ್ನು ನೋಡಿ : ಸರ್ಕಾರದಿಂದ ಬರಲಿದೆ ಮತ್ತೊಂದು ಗುಡ್ ನ್ಯೂಸ್, ಇನ್ಮುಂದೆ ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆ ಬಿಸಿಯೂಟ!?




