BigBoss : ಬಿಗ್ಬಾಸ್ ಕನ್ನಡ ಸೀಸನ್ 12ರ ಪಟ್ಟ ಗೆದ್ದ ಗಿಲ್ಲಿ (Gilli) ಅವರು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajakumar) ಅವರನ್ನು ಆತ್ಮೀಯವಾಗಿ ಭೇಟಿ ಮಾಡಿದ್ದಾರೆ.

BigBoss : ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಶಿವಣ್ಣ ನಿವಾಸದಲ್ಲಿ ಭೇಟಿ
ಗಿಲ್ಲಿ ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಶಿವಣ್ಣ ಅವರ ನಿವಾಸಕ್ಕೆ ತೆರಳಿ ಭೇಟಿ ನೀಡಿ, ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ದಂಪತಿ ಗಿಲ್ಲಿಗೆ ಸಿಹಿ ತಿನಿಸಿ, ಹೃದಯಪೂರ್ವಕವಾಗಿ ಶುಭ ಹಾರೈಸಿದರು.
ಈ ಭೇಟಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಫಿನಾಲೆಗೂ ಮುನ್ನ ಶಿವಣ್ಣನ ಭವಿಷ್ಯ ನುಡಿ
ಬಿಗ್ಬಾಸ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ,“ಗಿಲ್ಲಿಯೇ ಈ ಸೀಸನ್ ಗೆಲ್ಲೋದು” ಎಂದು ಶಿವಣ್ಣ ಭವಿಷ್ಯ ನುಡಿದಿದ್ದರು.
ಅವರ ಮಾತು ಇದೀಗ ನಿಜವಾಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ 40 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ನಟಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.
ಗಿಲ್ಲಿಯ ಈ ಗೆಲುವಿಗೆ ಅಭಿಮಾನಿಗಳು ಭಾರೀ ಸಂಭ್ರಮ ವ್ಯಕ್ತಪಡಿಸಿದ್ದು, ಶಿವಣ್ಣನ ಆಶೀರ್ವಾದದಿಂದ ಗಿಲ್ಲಿಯ ಮುಂದಿನ ಸಿನಿ ಹಾಗೂ ವೃತ್ತಿಜೀವನ ಮತ್ತಷ್ಟು ಎತ್ತರಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




