Mirabai Chanu: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಮೀರಾಬಾಯಿ ಚಾನು ಅವರು ಸಜ್ಜಾಗುತ್ತಿದ್ದು, 53 ಕೆಜಿ ವರೆಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

Mirabai Chanu: ಭಾರತದ ಸ್ಟಾರ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ 49 ಕೆಜಿ ವಿಭಾಗವನ್ನು ಕೈಬಿಟ್ಟಿರುವುದರಿಂದ, 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
49 ಕೆಜಿ ವಿಭಾಗ ರದ್ದು – ಮೀರಾಬಾಯಿ ಚಾನುಗೆ ಹೊಸ ಸವಾಲು!
ಟೋಕಿಯೊ ಒಲಿಂಪಿಕ್ಸ್ನಲ್ಲಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಇದೀಗ ತೂಕ ಹೆಚ್ಚಿಸಿಕೊಳ್ಳುವ ಮೂಲಕ ಹೊಸ ವಿಭಾಗದಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.

ವೇಟ್ಲಿಫ್ಟಿಂಗ್ ಫೆಡರೇಶನ್ 49 ಕೆಜಿ ವಿಭಾಗವನ್ನು ರದ್ದುಪಡಿಸಿ, ಮಹಿಳೆಯರ ಕನಿಷ್ಠ ತೂಕ ವರ್ಗವನ್ನು 53 ಕೆಜಿ ನಿಗದಿಪಡಿಸಿದೆ. ಪುರುಷರ ಕನಿಷ್ಠ ತೂಕ ವರ್ಗವು 65 ಕೆಜಿ ಆಗಿದೆ.
ಇದನ್ನೂ ಓದಿ: World Cup Final: ಮಹಿಳಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ – ರೋಹಿತ್ ಶರ್ಮಾ ಭಾವುಕರಾದ ಕ್ಷಣ ವೈರಲ್!
ಒಲಿಂಪಿಕ್ಸ್ ತೂಕ ಬದಲಾವಣೆ – ಮೀರಾಬಾಯಿ ಚಾನುಗೆ ತರಬೇತುದಾರರಿಂದ ಬೆಂಬಲ
ಮೀರಾಬಾಯಿ ಚಾನು 53 ಕೆಜಿ ವಿಭಾಗದಲ್ಲಿ ಭಾಗವಹಿಸುತ್ತಿರುವುದು ಅವರ ಶರೀರದ ಸಾಮರ್ಥ್ಯ ಹಾಗೂ ತಾಂತ್ರಿಕ ದೃಷ್ಟಿಯಿಂದ ಸಹಕಾರಿ ಆಗಲಿದ್ದು, ಮುಂದಿನ ವರ್ಷದ ಏಷ್ಯನ್ ಕ್ರೀಡಾಕೂಟದವರೆಗೆ 49 ಕೆಜಿ ವಿಭಾಗದಲ್ಲೇ ಅವರು ಸ್ಪರ್ಧಿಸಲಿದ್ದಾರೆ ಎಂದು ಭಾರತದ ಮುಖ್ಯ ರಾಷ್ಟ್ರೀಯ ತರಬೇತುದಾರ ವಿಜಯ್ ಶರ್ಮಾ ತಿಳಿಸಿದ್ದಾರೆ.

ಏಷ್ಯನ್ ಗೇಮ್ಸ್ ನಂತರ ಮೀರಾಬಾಯಿ ಚಾನು 53 ಕೆಜಿ ವಿಭಾಗದಲ್ಲಿ ಸ್ಪರ್ಧೆ
2026ರ ಏಷ್ಯನ್ ಗೇಮ್ಸ್ ನಂತರ ಮೀರಾಬಾಯಿ ಚಾನು ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿದ್ದು, ಕ್ರೀಡಾಭಿಮಾನಿಗಳು ಚಾನು ಅವರಿಂದ ಮತ್ತೊಂದು ಚಿನ್ನದ ಕನಸನ್ನು ಸಾಕಾರಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.
MUST WATCH: IPL CRICKET | ಬೂಮ್ರಾ ಕರುಣ್ ನಾಯರ್ ಕಿತ್ತಾಟ -ಇಂಟರ್ ನೆಟ್ ನಲ್ಲಿ ನಿಲ್ತಿಲ್ಲ ಜಗಳ




