Rain Alert : ನಾಳೆಯಿಂದ ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Rain Alert : ನಾಳೆಯಿಂದ (ನವೆಂಬರ್ 5) ಬೆಂಗಳೂರು ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆ
ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಬುಧವಾರದಿಂದ ಮುಂದಿನ ಎರಡು ದಿನಗಳು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಳೆ ಹಿನ್ನೆಲೆ ಕಡಲ ತೀರ ಪ್ರದೇಶದ ಜನರು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಇದನ್ನು ಓದಿ : ಸೀರಿಯಲ್ ನಟಿಗೆ ರೇಣುಕಾಸ್ವಾಮಿ ರೀತಿ ಲೈಂಗಿಕ ಕಿರುಕುಳ
ದೀಪಾವಳಿ ನಂತರ ಬಿಸಿಲಿನ ತಾಪಮಾನ ಹೆಚ್ಚಳ
ದೀಪಾವಳಿ ಹಬ್ಬದ ನಂತರ ರಾಜ್ಯದ ಕೆಲ ಭಾಗಗಳಲ್ಲಿ ತಾಪಮಾನ ಏರಿಕೆ ಕಂಡುಬಂದಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಿದ್ದು, ಜನರು ತಾಪದಿಂದ ಬಳಲುತ್ತಿದ್ದಾರೆ.
ಮತ್ತೆ ಚುರುಕು ಆಗುತ್ತಿರುವ ಮೋಡ ಚಟುವಟಿಕೆ
ಹವಾಮಾನ ತಜ್ಞರ ಪ್ರಕಾರ, ಕಡಲ ತೀರ ಪ್ರದೇಶದಲ್ಲಿ ಮತ್ತೆ ಚುರುಕು ಆಗಿರುವ ಮೋಡ ಚಟುವಟಿಕೆಯಿಂದಾಗಿ ಮಳೆಯು ತೀವ್ರಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಸ್ಥಳೀಯ ಆಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಜನರಿಗೆ ಎಚ್ಚರಿಕೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಅನಾವಶ್ಯಕವಾಗಿ ಹೊರಗೆ ಹೋಗದೇ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕಡಲ ತೀರ ಪ್ರದೇಶದ ಮೀನುಗಾರರು ಮುಂದಿನ ಕೆಲವು ದಿನಗಳು ಸಮುದ್ರಕ್ಕೆ ಹೋಗಬಾರದು ಎಂದು ಸಲಹೆ ನೀಡಲಾಗಿದೆ.
ಇದನ್ನು ನೋಡಿ : ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ




