Harassment : ಖ್ಯಾತ ಸೀರಿಯಲ್ ನಟಿಗೆ ಕಾಮುಕನೊಬ್ಬ ಮೃತ ರೇಣುಕಾಸ್ವಾಮಿ ರೀತಿ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

Harassment : ಪ್ರಸಿದ್ಧ ಟೆಲಿವಿಷನ್ ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ಸೀರಿಯಲ್ ನಟಿಗೆ ಒಬ್ಬ ಕಾಮುಕನಿಂದ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ವಿಡಿಯೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಫೇಸ್ಬುಕ್ನಲ್ಲಿ ಆರಂಭವಾದ ಕಿರುಕುಳ
ʻNAVEENZʼ ಎಂಬ ಫೇಸ್ಬುಕ್ ಖಾತೆಯಿಂದ ಆರೋಪಿ ನಟಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ನಟಿ ಆ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆಯಲ್ಲಿ ಆರೋಪಿ ಮೆಸೆಂಜರ್ನಲ್ಲಿ ನಿರಂತರವಾಗಿ ಮೆಸೇಜ್ ಕಳುಹಿಸಲು ಆರಂಭಿಸಿದ್ದಾನೆ. ಕಳೆದ ಮೂರು ತಿಂಗಳಿನಿಂದ ಅವನು ನಟಿಗೆ ಅಶ್ಲೀಲ ಸಂದೇಶಗಳು ಹಾಗೂ ವಿಡಿಯೋ ಕಳುಹಿಸುತ್ತಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ಲಾಕ್ ಮಾಡಿದ್ರೂ ನಿಲ್ಲದ ಕಾಟ
ನಟಿ ಆರೋಪಿಗೆ ಎಚ್ಚರಿಕೆ ನೀಡಿದ್ರು, ಆದರೂ ಕಿರುಕುಳ ಮುಂದುವರಿದಿದೆ. ನಟಿ ಆತನ ಖಾತೆಯನ್ನು ಬ್ಲಾಕ್ ಮಾಡಿದರೂ, ಆರೋಪಿ ಬೇರೆ ಖಾತೆಗಳಿಂದ ಅಶ್ಲೀಲ ಮೆಸೇಜ್ಗಳು ಹಾಗೂ ತನ್ನ ಗುಪ್ತಾಂಗದ ವಿಡಿಯೋ ಕಳುಹಿಸುತ್ತಿದ್ದ.
ಇದನ್ನು ಓದಿ : ಜಿಬಿಎ ಕ್ಷೇತ್ರ ಪುನರ್ ವಿಂಗಡಣೆಗೆ ಸುಪ್ರೀಂಕೋರ್ಟ್ 15 ದಿನಗಳ ಕಾಲಾವಕಾಶ..!
ನಟಿಯ ಶಾಂತಿಯ ಪ್ರಯತ್ನ ವಿಫಲ
ನಟಿ ನವೆಂಬರ್ 1 ರಂದು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಆರೋಪಿಯನ್ನು ಭೇಟಿಯಾಗಿ ಬುದ್ಧಿಮಾತು ಹೇಳಿದ್ದಾರೆ. “ಈ ರೀತಿಯ ಮೆಸೇಜ್ಗಳು ಕಳುಹಿಸಬೇಡಿ” ಎಂದು ಕಿವಿಮಾತು ಹೇಳಿದರೂ ಆರೋಪಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಮತ್ತೆ ಕಿರುಕುಳ ನೀಡಿದ್ದಾನೆ.
ಪೊಲೀಸರ ಕಾರ್ಯಾಚರಣೆ
ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನೆಲೆ, ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ನಟಿಯ ಹೆಸರು ಬಹಿರಂಗಪಡಿಸಿಲ್ಲ
ಪೊಲೀಸರು ಸಂತ್ರಸ್ತೆಯ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ಇದನ್ನು ನೋಡಿ : ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ




