KMF Feeds Scam : ಕೆಎಂಎಫ್ ಅಧ್ಯಕ್ಷರೇ… ಗೃಹ ಸಚಿವ ಪರಮೇಶ್ವರ್ ಸಾಹೇಬ್ರೇ… ಒಮ್ಮೆ ಈ ಸುದ್ದಿಯನ್ನು ನೋಡಿ. ಕೆಎಂಎಫ್ ನಲ್ಲಿ ಭಾರೀ ಮೋಸ ನಡೆಯುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬರ್ತಿದೆ.

KMF Feeds Scam : ಕೆಎಂಎಫ್ (KMF) ನಲ್ಲಿ ಭಾರೀ ಮೋಸ ನಡೆಯುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬರ್ತಿದೆ. ಹಸುಗಳಿಗೆ ನೀಡುವ ಫೀಡ್ಸ್ ನಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಅನ್ನೋ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮುಸುಕಿನ ಜೋಳದ ಫೀಡ್ಸ್ ಕಳೆಪೆ
ಕೆಎಂಎಪ್ ಫೀಡ್ಸ್ ಉತ್ಫಾದನಾ ಘಟದಲ್ಲಿ ದೊರೆಯುತ್ತಿರುವ ಹಸುಗಳಿಗೆ ಹಾಕುವ ಮುಸುಕಿನ ಜೋಳದ ಫೀಡ್ಸ್ ಕಳಪೆಯಿಂದ ಕೂಡಿದ್ದು, ಹಸುಗಳು ಆಹಾರವನ್ನು ತಿನ್ನಲು ಹಿಂದೇಟು ಹಾಕುತ್ತಿವೆ ಅನ್ನೋ ಆರೋಪ ಕೇಳಿಬಂದಿದೆ.
ಪರೀಕ್ಷೆಯಲ್ಲಿ ರಿಜೆಕ್ಟ್ ಆದ ಜೋಳ ಬೇರೆ ಗಾಡಿಗೆ ಲೋಡ್
ಗುಬ್ಬಿ ಪಟ್ಟಣದ ಕೆಎಂಎಫ್ ಉತ್ಪಾದನ ಘಟಕಕ್ಕೆ ಪ್ರತಿನಿತ್ಯ ಲೋಡ್ ಗಟ್ಟಲೇ ಮುಸುಕಿನ ಜೋಳ ಹೋಗುತ್ತೆ. ಉತ್ಪಾದನಾ ಘಟಕದಲ್ಲಿ ಆ ಮುಸುಕಿನ ಜೋಳವನ್ನು ಪರೀಕ್ಷೆ ಮಾಡಲಾಗುತ್ತದೆ. ಅಧಿಕಾರಿಗಳು ರಿಜೆಕ್ಟ್ ಮಾಡಿ ಕಳುಹಿಸಿದ ಗಾಡಿಗಳು ಹೊರಬಂದು ಬೇರೆ ಗಾಡಿಗೆ ಲೋಡ್ ಮಾಡುತ್ತಾರೆ.
ಇದನ್ನು ಓದಿ : ನವೆಂಬರ್ 10ಕ್ಕೆ ದರ್ಶನ್ ವಿಚಾರಣೆ ಮುಂದೂಡಿಕೆ

ಆ ಗಾಡಿ ಒಳಗಡೆ ಮತ್ತೆ ಪರೀಕ್ಷೆಗೆ ಹೋದಾಗ ಓಕೆ ಆಗಿರುತ್ತದೆ. ಈ ರೀತಿಯಾಗಿ ಅಕ್ರಮವೆಸಗುತ್ತಿರುವುದು ಯಾಕೆ,? ಅಧಿಕಾರಿಗಳಿಗೆ ಇಂತಹ ದೋಖ ಗೊತ್ತಾಗುತ್ತಿಲ್ಲವೇ. ಒಂದು ವೇಳೆ ಗೊತ್ತಿದ್ದರೂ ಕೂಡ ಜಾಣಕುರುಡುತನ ತೋರುತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಮೂಕ ಜೀವಗಳ ಜೊತೆ ಚೆಲ್ಲಾಟ
ಇಂತಹ ಫೀಡ್ಸ್ ಅನ್ನು ಹಸುಗಳಿಗೆ ನೀಡಿದರೆ ಆ ಆಹಾರವನ್ನು ಹಸುಗಳು ಮುಟ್ಟುತ್ತಿಲ್ಲ. ಬೇರೆ ಆಹಾರವನ್ನು ನೀಡಿದ್ರೆ ಸಲೀಸಾಗಿ ತಿನ್ನುತ್ತವೆ. ಕೆ ಎಮ್ ಎಫ್ ಅಧಿಕಾರಿಗಳು ಮೂಕ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಲ್ಲಿ ಆಗುತ್ತಿರುವ ಮಹಾಮೋಸವನ್ನು ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತಾಗಿದೆ. ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಗುಬ್ಬಿ kmf ಘಟಕಕ್ಕೆ ಬಂದು ಪರಿಶೀಲನೆ ಮಾಡುವಂತೆ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

ಇದನ್ನು ನೋಡಿ : ಜಿಲ್ಲಾಸ್ಪತ್ರೆಯ ಮತ್ತೊಂದು ಯಡವಟ್ಟು! CM ಬರ್ತಾರೆ ಅಂತ ಶವಗಾರಕ್ಕೆ ತೇಪೆ




