Gubbi : ಆಟವಾಡ್ತಿದ್ದ ಮಗುವಿನ ಮೇಲೆ ವಿಧಿಯ ಅಟ್ಟಹಾಸ – ಭೀಕರ ಅಪಘಾತದಲ್ಲಿ ಪುಟ್ಟ ಬಾಲಕ ಸಾವು

ಬೆಳ್ಳಗೆಯೇ ಆಟವಾಡ್ತಿದ್ದ ಮಗುವಿನ ಮೇಲೆ ವಿಧಿಯ ಅಟ್ಟಹಾಸ ಮೆರೆದಿದ್ದು, ಭೀಕರ ಅಪಘಾತದಲ್ಲಿ ಬಾಲಕ ಸಾವನ್ನಪ್ಪಿರೋ ದಾರುಣ ಘಟನೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಅಂಗಡಿ ಮುಂದಿನ ರಸ್ತೆ ಬದಿಯಲ್ಲಿ ಸೈಕಲ್ನಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಏಕಾಏಕಿ ಎಲೆಕ್ಟ್ರಿಕಲ್ ಕಾರೊಂದು ಹರಿದಿದ್ದು, ಮಗು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ Gubbi ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.

ಹೆತ್ತ ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ
ನಿಟ್ಟೂರು ಗ್ರಾಮದ ರಾಘವೇಂದ್ರ ಟೆಕ್ಸ್ ಟೈಲ್ ಅಂಗಡಿಯ ಮಾಲೀಕನ ಮಗ 13 ವರ್ಷದ ಶೋಭಿತ್ ರಾಘವ್ ಅಪಘಾತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬಟ್ಟೆ ಅಂಗಡಿ ವ್ಯಾಪಾರ ಮಾಡಿಕೊಂಡು ಮೊಹನ್ ಕುಮಾರ್ ಜೀವನ ಸಾಗಿಸುತ್ತಿದ್ದರು. ಶಾಲೆಗೆ ರಜೆ ಇದ್ದ ಕಾರಣ ಬಾಲಕನನ್ನು ಅಂಗಡಿ ಬಳಿ ಕರೆದೊಯ್ದಿದ್ದರು. ಈ ವೇಳೆ ಅಂಗಡಿಯ ಮುಂದೆ ತನ್ನ ಸೈಕಲ್ ನಲ್ಲಿ ಆಟವಾಡುತ್ತಿದ್ದು, ಯಮ ಸ್ವರೂಪಿಯಾಗಿ ಬಂದ ಎಲೆಕ್ಟ್ರಿಕ್ ಕಾರು ಏಕಾಏಕಿ ಮಗುವಿನ ಮೇಲೆ ಹರಿದಿದೆ. ಅಪಘಾತದದ ರಭಸಕ್ಕೆ ಮಗು ಸಾವನ್ನಪ್ಪಿದ್ದು, ಹೆತ್ತ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
READ THIS : ಬಸವ ಜಯಂತಿ ಆಚರಿಸಿದ ಮಾಜಿ CM ಬಸವರಾಜ ಬೊಮ್ಮಾಯಿ

ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಸಹಾಯದಿಂದ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಲಿಸಲಾಗಿತ್ತು. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯಯೇ ಮಗು ತನ್ನ ಕೊನೆಯುಸಿರು ಎಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಗುವಿನ ಸಾವಿಗೆ ಕಾರಣರಾದ ಕಾರು ಮತ್ತು ಕಾರು ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

MUST WATCH : BIKE TAXI ಚಾಲಕರಿಗೆ BIG SHOCK..! – ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಸರ್ಕಾರ




