JEE Main 2026 : ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಶನ್ (JEE Main 2026) ಬರೆಯುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮಹತ್ವದ ಸ್ಪಷ್ಟನೆ

JEE Main 2026 : jEE Main ಅಭ್ಯರ್ಥಿಗಳಿಗೆ ಮುಖ್ಯ ಎಚ್ಚರಿಕೆ
ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಶನ್ (JEE Main 2026) ಬರೆಯುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮಹತ್ವದ ಸ್ಪಷ್ಟನೆ ನೀಡಿದೆ. ಈ ಬಾರಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಕ್ಯಾಲ್ಕುಲೇಟರ್ ಬಳಕೆ ನಿಷೇಧಿಸಲಾಗಿದೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
NTA ಪರಿಷ್ಕೃತ ಮಾಹಿತಿ ಬುಲೆಟಿನ್
ಇತ್ತೀಚೆಗೆ ಪ್ರಕಟವಾದ ಪರಿಷ್ಕೃತ ಬುಲೆಟಿನ್ ಪ್ರಕಾರ, ಹಿಂದಿನ ಪ್ರಕಟಣೆಯಲ್ಲಿ “ಆನ್ಸ್ಕ್ರೀನ್ ಕ್ಯಾಲ್ಕುಲೇಟರ್ ಲಭ್ಯವಿರುತ್ತದೆ” ಎಂಬ ಉಲ್ಲೇಖ ಮುದ್ರಣ ದೋಷದಿಂದ ಉಂಟಾದ ಪ್ರಮಾದ ಎಂದು ಎನ್ಟಿಎ ತಿಳಿಸಿದೆ.
NTA ಹೇಳಿಕೆಯ ಪ್ರಕಾರ —“JEE Main ಪರೀಕ್ಷೆಗೆ ಯಾವುದೇ ರೀತಿಯ ಕ್ಯಾಲ್ಕುಲೇಟರ್ ಬಳಕೆಗೆ ಅನುಮತಿ ನೀಡಿಲ್ಲ. ಮಾಹಿತಿ ಬುಲೆಟಿನ್ನಲ್ಲಿದ್ದ ತಪ್ಪು ಉಲ್ಲೇಖವು ಜನರಲ್ CBT ಪರೀಕ್ಷೆಗೆ ಮಾತ್ರ ಅನ್ವಯವಾಗುತ್ತದೆ, JEE Mainಗೆ ಅಲ್ಲ.”

JEE Main 2026 ಅರ್ಜಿ ಪ್ರಕ್ರಿಯೆ
- ನೋಂದಣಿ ಪ್ರಕ್ರಿಯೆ ಆರಂಭ: ಅಕ್ಟೋಬರ್ 31, 2025
- ಕೊನೆಯ ದಿನಾಂಕ: ನವೆಂಬರ್ 27, 2025
- ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
- ಈ ವರ್ಷ 15 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆಯಿದೆ.
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್: jeemain.nta.nic.in
ಕ್ಯಾಲ್ಕುಲೇಟರ್ ಬಳಕೆಯ ನಿಯಮ
- ಹ್ಯಾಂಡ್ಹೆಲ್ಡ್ ಕ್ಯಾಲ್ಕುಲೇಟರ್, ವರ್ಚುವಲ್ ಕ್ಯಾಲ್ಕುಲೇಟರ್, ಅಥವಾ ಆನ್ಸ್ಕ್ರೀನ್ ಕ್ಯಾಲ್ಕುಲೇಟರ್ — ಯಾವುದೇ ರೂಪದಲ್ಲೂ ನಿಷೇಧ.
- ಪರೀಕ್ಷೆಯ ಸಮಯದಲ್ಲಿ ಯಾವುದೇ ಇಲೆಕ್ಟ್ರಾನಿಕ್ ಸಾಧನ ಬಳಸುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ.
ಪರೀಕ್ಷೆಯ ವೇಳಾಪಟ್ಟಿ
- ಸೆಷನ್ 1: ಜನವರಿ 21 – 30, 2026
- ಫಲಿತಾಂಶ ಪ್ರಕಟ: ಫೆಬ್ರವರಿ 12, 2026
- ಸೆಷನ್ 2: ಏಪ್ರಿಲ್ 2 – 9, 2026
- ಫಲಿತಾಂಶ ಪ್ರಕಟ: ಏಪ್ರಿಲ್ 20, 2026
ಭಾಷಾ ಆಯ್ಕೆಗಳು
ಪರೀಕ್ಷೆ 13 ಭಾಷೆಗಳಲ್ಲಿ ನಡೆಯಲಿದೆ:
ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು.
MUST READ : Kitchen recipe : ಹಾಗಲಕಾಯಿ ಟೊಮೆಟೊ ಪಲ್ಯ




