ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ – ಬಸ್ ನಜ್ಜುಗುಜ್ಜು.. ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

ಇತ್ತೀಚಿನ ದಿನಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಮಾರ್ಗಮಧ್ಯೆ ಕೆಟ್ಟು ಹೋಗ್ತಾ ಇದ್ರೆ, ಇನ್ನು ಕೆಲವು ಕಡೆ ನಿಯಂತ್ರಭ ಕಳೆದುಕೊಂಡು ಅಪಘಾತಕ್ಕೀಡಾಗುತ್ತಿದ್ದು, ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ.
ಇದೀಗ ಮಾರ್ಗಮಧ್ಯೆಯೇ ಕೆಎಸ್ಆರ್ಟಿಸಿ ಬಸ್ವೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎಂ.ಎಚ್ ಪಟ್ಟಣ ಗೇಟ್ ಬಳಿಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ತಿಪಟೂರು ಡಿಪೋ ಗೆ ಸೇರಿದ ಹೊಸದುರ್ಗ ಮತ್ತು ಬೆಂಗಳೂರು ಎಕ್ಸ್ಪ್ರೆಸ್ KSRTC ಬಸ್, ಗುಬ್ಬಿ ಕಡೆಯಿಂದ ತುಮಕೂರು ಕಡೆಗೆ ಚಲಿಸುತ್ತಿತ್ತು.
ಗುಬ್ಬಿಯ ಕಳ್ಳಿಪಾಳ್ಯ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಬಸ್ ಬರ್ತಾ ಇದ್ದಂತೆ, ತಾಂತ್ರಿಕ ದೋಷದಿಂದ ಬಸ್ ನಲ್ಲಿ ಅಳವಡಿಸಿದ್ದ ಸ್ಟೇರಿಂಗ್ ಆಕ್ಸೆಲ್ ತುಂಡಾಗಿದೆ.
ಇದ್ರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆಗೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

READ THIS : SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ – ಹೈಕೋರ್ಟ್ ಆದೇಶ
ಸುಮಾರು ಐದಾರು ಮಂದಿಗೆ ಗಂಭೀರ ಗಾಯ
ಬಸ್ ನಲ್ಲಿ ಸುಮಾರು 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡ್ತಾ ಇದ್ದು, ಸುಮಾರು ಐದಾರು ಮಂದಿಗೆ ಗಂಭೀರ ಗಾಯಗಳಾಗಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ NHAI ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಿ, ಗುಬ್ಬಿ ಸರ್ಕಾರಿ ಆಸ್ಪತೆಗೆ ದಾಖಲಿಸಿದ್ರು, ಗಾಯಗೊಂಡ ಕೆಲ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೆ ನಿಖರ ಕಾರಣ ತಿಳಿದು ಬರಲಿದೆ.

MUST WATCH : ತಮಿಳುನಾಡಿನಲ್ಲಿ ಡಿಸಿಎಂ ಡಿಕೆಶಿ ಅಬ್ಬರದ ಪ್ರಚಾರ – ಹೊರ ರಾಜ್ಯದಲ್ಲೂ ಡಿಕೆ ಹವಾ




