Karnatka Weather : ರಾಜ್ಯದಲ್ಲಿ ಹಲವು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆಗೆ ಇದೀಗ ಸ್ವಲ್ಪ ವಿರಾಮ ಸಿಕ್ಕಿದೆ.

Karnatka Weather : ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆಗೆ ಈಗ ಸ್ವಲ್ಪ ವಿರಾಮ ಸಿಕ್ಕಿದೆ. ಹವಾಮಾನ ಇಲಾಖೆ ತಿಳಿಸಿದಂತೆ, ಇಂದು ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಒಣಹವಾಮಾನ ಮುಂದುವರಿಯಲಿದೆ.
ಉತ್ತರ ಒಳನಾಡಿನಲ್ಲಿ ಮಳೆ ಸಾಧ್ಯತೆ ಇಲ್ಲ
ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಯಾವುದೇ ಲಕ್ಷಣವಿಲ್ಲ.
ದಕ್ಷಿಣ ಒಳನಾಡಿನ ಪರಿಸ್ಥಿತಿ
ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಅತಿ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿ : ಹಳಿಗಿಳಿಯಿತು ಹಳದಿ ಮಾರ್ಗದ ಐದನೇ ಮೆಟ್ರೋ
ಕರಾವಳಿ ಜಿಲ್ಲೆಗಳಲ್ಲಿ ಒಣಹವಾಮಾನ
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮಳೆ ಅಬ್ಬರ ತಣಿದು, ಸದ್ಯಕ್ಕೆ ಒಣ ಹವಾಮಾನ ಮುಂದುವರಿಯುತ್ತಿದೆ.
ಬೆಂಗಳೂರು ಹವಾಮಾನ
ಬಿಜೆಎಲ್ ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ.
- ಗರಿಷ್ಠ ತಾಪಮಾನ: 29°C
- ಕನಿಷ್ಠ ತಾಪಮಾನ: 19°C
- ಗಾಳಿಯ ವೇಗ: 10 ಕಿ.ಮೀ./ಗಂ
ಮುಂದಿನ ದಿನಗಳಲ್ಲಿ ಹವಾಮಾನ ನಿರೀಕ್ಷೆ
ಒಟ್ಟಾರೆ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇದನ್ನು ನೋಡಿ : ನಾಳೆಯ ಹವಾಮಾನ: ಕರಾವಳಿಯ ಕೆಲವೆಡೆ ಮಾತ್ರ ಮಳೆ, ಉತ್ತರ ಒಳನಾಡಲ್ಲಿ ಒಣ ಹವೆ




