
ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜೆ.ಡಿ.ಎಲ್.ಪಿ ನಾಯಕರಾದ ಸುರೇಶ್ ಬಾಬು ʼಶಾಸಕರ 16ನೇ ವಾರದ ಮನೆ ಬಾಗಿಲಿಗೆ ಮನೆ ಮಗ’ ಚಿಕ್ಕನಾಯಕನಹಳ್ಳಿ ನಗರ ಪುರಸಭೆ ವ್ಯಾಪ್ತಿಯಲ್ಲಿ ಜರುಗಿತು.
ಈ ಕಾರ್ಯಕ್ರಮದ ಅಂಗವಾಗಿ ವಾರ್ಡ್ ಸಂಖ್ಯೆ 05ರಿಂದ 08ರ ವರೆಗೆ ಶಾಸಕರು ನಾಗರಿಕರೊಂದಿಗೆ ನೇರವಾಗಿ ಸಂವಾದ ನಡೆಸಿದರು. ಜನರಿಂದ ಬಂದ ಕುಡಿಯುವ ನೀರಿನ ಸಮಸ್ಯೆ, ರಸ್ತೆ-ಚರಂಡಿ ಕಾಮಗಾರಿಗಳ ವಿಳಂಬ, ಬೀದಿ ದೀಪಗಳ ದುರಸ್ತಿ, ಮನೆ ಪಡಿತರ ಕಾರ್ಡ್ ಸಮಸ್ಯೆ ಸೇರಿದಂತೆ ಹಲವು ಅಹವಾಲುಗಳನ್ನು ಶಾಸಕರು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ಜನರು ಶಾಸಕರ ಈ ಜನಪರ ಕಾರ್ಯಚಟುವಟಿಕೆಯನ್ನು ಮೆಚ್ಚಿ, “ನಮ್ಮ ಸಮಸ್ಯೆಗಳಿಗೆ ತಕ್ಷಣದ ಸ್ಪಂದನೆ ದೊರೆಯುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.




