
RENUKA SWAMY MURDER CASE : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾ ಗಿರುವ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ದೋಷಾರೋಪಣೆ ನಿಗದಿಗೆ ಸಂಬಂಧಿಸಿದ ವಿಚಾರಣೆ ಯನ್ನು ನಗರದ 57ನೇ ಸಿಸಿಎಚ್ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.
ಇಂದು (ಸೆಪ್ಟೆಂಬರ್ 19) ನಡೆದ ನ್ಯಾಯಾಲಯದ ವಿಚಾರಣೆಗೆ ಇಬ್ಬರು ಆರೋಪಿಗಳು ಗೈರಾಗಿದ್ದ ಕಾರಣ, ವಿಚಾರಣೆ ಮುಂದೂಡಲಾಗಿದೆ. ಇನ್ನು ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಉಳಿದ ಆರೋಪಿಗಳ ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಪವಿತ್ರಾ ಗೌಡ ಪರ ವಕೀಲರು, ತಮ್ಮ ಕಕ್ಷಿದಾರರ ಪರವಾಗಿ ದೋಷಾರೋಪಣೆ ನಿಗದಿಗೆ ಮನವಿ ಸಲ್ಲಿಸಿ ದ್ದರು. ಎಲ್ಲಾ ಆರೋಪಿಗಳು ಹಾಜರಿಲ್ಲದ ಹಿನ್ನೆಲೆ ವಿಚಾರಣೆ ಮುಂ ದೂಡಬೇಕಾಯಿತು. ನಟ ದರ್ಶನ್ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ಒದಗಿಸಿಲ್ಲ ಎಂಬ ಅವರ ಪರ ವಕೀಲರ ಆರೋಪದ ಕುರಿತು ಜೈಲಾಧಿ ಕಾರಿಗಳಿಂದ ನ್ಯಾಯಾಧೀಶರು ವಿವರಣೆ ಕೇಳಿದರು. ಜೈಲಿನ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ಒದಗಿದಲಾ ಗುತ್ತಿದೆ ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ದರ್ಶನ್ ಸೇರಿ ದಂತೆ ಏಳು ಮಂದಿ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.




