
BENGALURU NEWS : ನಂದಿನಿ ಬ್ರಾಂಡ್ನ ಮೊಸರು, ತುಪ್ಪ, ಲಸ್ಸಿ ಹಾಗೂ ಬೆಣ್ಣೆ ಸೇರಿದಂತೆ ಹಲವಾರು ಹಾಲು ಉತ್ಪನ್ನಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ. ಈ ಕುರಿತ ಮಹತ್ವದ ಸಭೆ ಇಂದು ಕೆಎಂಎಫ್ನ (KMF) ಹಿರಿಯ ಅಧಿಕಾರಿಗಳೊಂದಿಗೆ ನಡೆಯಲಿದೆ.
ಕೇಂದ್ರ ಸರ್ಕಾರದಿಂದ GST ಇಳಿಕೆ ಬೆನ್ನಲ್ಲೇ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆಗೆ ತೀರ್ಮಾನಿಸಿದೆ. ಆಹಾರ ಉತ್ಪನ್ನಗಳ ಮೇಲಿನ GSTಯನ್ನ ಶೇಕಡಾ 12 ರಿಂದ 5ಕ್ಕೆ ಇಳಿಕೆ ಹಿನ್ನೆಲೆ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ ಸಾಧ್ಯತೆ ಇದೆ.
ದರ ಇಳಿಕೆ ಸಭೆಯಲ್ಲಿ ನಿರ್ಧಾರವಾಗಲಿದ್ದು, ಸೆಪ್ಟೆಂಬರ್ 22ರಿಂದಲೇ ನಂದಿನಿ ಉತ್ಪನ್ನಗಳ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ. ವಿಶೇಷವಾಗಿ, ಮೊಸರಿನ ದರ ಲೀಟರ್ಗೆ ರೂ.4 ರವರೆಗೆ ಕಡಿಮೆಯಾಗಬಹುದು ಎಂಬ ಅಂದಾಜು ಇದೆ.
2017ರಲ್ಲಿ ಹಾಲು ಉತ್ಪನ್ನಗಳ ಮೇಲೆ ಜಿಎಸ್ಟಿ ಜಾರಿಯಾಗಿತ್ತು. ನಂತರ 2022ರಲ್ಲಿ ಜಿಎಸ್ಟಿ ಶೇಕಡಾ 12ಕ್ಕೆ ಹೆಚ್ಚಿಸಲಾಗಿತ್ತು. ಈಗ ಜಿಎಸ್ಟಿ ಇಳಿಕೆಯೊಂದಿಗೆ ಗ್ರಾಹಕರ ಮೇಲಿನ ಆರ್ಥಿಕ ಭಾರ ಸಹ ಇಳಿಯಲಿ ದೆ ಎಂಬ ನಿರೀಕ್ಷೆಯಿದೆ.




