
TUMKUR: ಪ್ರಜಾಶಕ್ತಿ ಟಿವಿ ಶುರುವಾಗಿನಿಂದಲೂ ರಾಜಕಾರಣಿಗಳ,ಅಧಿಕಾರಿ ವರ್ಗದವರ ತಪ್ಪು ಸರಿಗಳನ್ನ ನೇರ, ದಿಟ್ಟವಾಗಿ, ನಿಷ್ಪಕ್ಷಪಾತವಾಗಿ ವರದಿ ಮಾಡುತ್ತಾ ಜನರ ಮುಂದೆ ಇಡುತ್ತಿದೆ. ಜನರು ಕೂಡ ಪ್ರಜಾಶಕ್ತಿ ಟಿವಿ ವರದಿಯ ವಾಸ್ತತೆಯನ್ನು ಒಪ್ಪಿಕೊಂಡು ಜೊತೆ ನಿಂತಿರುವ ನಿದರ್ಶನಗಳು ಕೂಡ ಇವೆ.ಇತ್ತ ತುಮಕೂರು ಜಿಲ್ಲಾಡಳಿತ ಮಾಡಿದ ಮಹಾ ಎಡಬಟ್ಟೊಂದನ್ನ ಬಿಚ್ಚಿಡುವ ಮುಖಾಂತರ. ನಿಮ್ಮ ಪ್ರಜಾಶಕ್ತಿಟಿವಿ ವಿಸ್ತೃತ ವರದಿ ಮಾಡಿತ್ತು.ಇದೀಗ ವರದಿಗೆ ಎಚ್ಚೆತ್ತಾ ತುಮಕೂರು ಜಿಲ್ಲಾಡಳಿತ ರಾತ್ರೋರಾತ್ರಿ ಕ್ರಮ ಜರುಗಿಸಿ. ವಿಷಿಂಗ್ ಪ್ಲೇಕ್ಸ್ ನಲ್ಲಿಕಾಣೆಯಾಗಿದ್ದವರಪೋಟೋಗಳನ್ನುಹಾಕಿಸಿದೆ.
ಗೃಹ ಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮೈಸೂರು ರೀತಿಯೇ ನಾಡಹಬ್ಬ ದಸರವನ್ನ ಈ ಬಾರಿ ತುಮಕೂರಿನಲ್ಲೂ ಆಚರಿಸಬೇಕೆಂಬ ಪಣತೊಟ್ಟಿದ್ದಾರೆ.ಅದರ ಅನುಸಾರವಾಗಿ ಕಾರ್ಯನಿರ್ವಹಿಸದೆ, ತುಮಕೂರು ಜಿಲ್ಲಾಡಳಿತ ಅಧಿಕೃತ ದಸರಾ ಫ್ಲೆಕ್ಸ್ ಗಳಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸುವ ನಗರ ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಕೆ.ಎನ್ ರಾಜಣ್ಣ, ಎಂಎಲ್ ಸಿ ರಾಜೇಂದ್ರ ಭಾವಚಿತ್ರಗಳನ್ನು ಹಾಕದೆ ಶಿಷ್ಟಾಚಾರ ಉಲ್ಲಂಘನೆ ಮಾಡಿತ್ತು. ಇತ್ತಜಿಲ್ಲಾಡಳಿತದಕ್ರಮಕ್ಕೆ ಕಾರ್ಯಕರ್ತರು, ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಬಗ್ಗೆ ವಿಸ್ತೃತವಾಗಿ ನಿಮ್ಮ ಪ್ರಜಾ ಶಕ್ತಿ ಟಿವಿ ವರದಿ ಮಾಡಿತ್ತು. ಬೆಳಗಾಗುವಷ್ಟರಲ್ಲಿಎಂಎಲ್ ಎ, ಎಂಎಲ್ಸಿಗಳಪೋಟೋಗಳುಪ್ಲೇಕ್ಸ್ ನಲ್ಲಿರಾರಾಜಿಸುತ್ತಿವೆ.
ಪ್ರಜಾ ಶಕ್ತಿ ಟಿವಿಯ ಏಳು ಗಂಟೆಯ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲಿ ಜ್ಯೋತಿ ಗಣೇಶ್,ರಾಜಣ್ಣ ಅಭಿಮಾನಿಗಳು ಯಾವಾಗ ಆಕ್ರೋಶ ಹೊರಹಾಕಿದ್ರೋ, ಕೂಡಲೇ ಕೆಲವೇ ಗಂಟೆಗಳಲ್ಲಿ ರಾತ್ರೋರಾತ್ರಿ ಫ್ಲೆಕ್ಸ್ ಗಳನ್ನ ತೆರವು ಮಾಡಿದ ಜಿಲ್ಲಾಡಳಿತ, ಜಿಲ್ಲೆಯ ಎಲ್ಲಾ ಶಾಸಕರುಗಳ ಫೋಟೋ ಇರುವಫ್ಲೆಕ್ಸ್ ಗಳನ್ನ ಹಾಕಿಸಿದೆ.
ಒಟ್ಟಾರೆ ಜಿಲ್ಲೆಯ ಪ್ರತಿಯೊಬ್ಬರು ಸೇರಿ ಆಚರಿಸಬೇಕಾದ ನಾಡಹಬ್ಬ ತುಮಕೂರು ದಸರಾವನ್ನ, ಜಿಲ್ಲಾಡಳಿತ ಕೆಲವೊಂದು ಎಡವಟ್ಟುಗಳು ಜನಸಾಮಾನ್ಯರಿಗೆ ನೋವುಂಟಾಗಬಾರದು. ಅದೇ ಪ್ರಜಾ ಶಕ್ತಿಟಿವಿಯ ಆಶಯವೂ ಕೂಡ




