Heart Attack : ನಾಳೆ ಮದುವೆ ಆಗಬೇಕಿದ್ದ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Heart Attack : ಆಕೆ ಹಸಮಣೆ ಏರುವ ಖುಷಿಯಲ್ಲಿದ್ದಳು. ತುಂಬಾ ದಿನಗಳಿಂದ ಕಂಡಿದ ಕನಸು ಇನ್ನೇನು ನಾಳೆ ಅನ್ನುಷ್ಟರಲ್ಲಿ ಈಡೇರುತ್ತಿತ್ತು. ಆದರೆ ಆಕೆಯ ಬಾಳಿನ ವಿಧಿಬರಹ ತುಂಬಾನೇ ಕ್ರೂರವಾಗಿತ್ತು. ಮದುವೆ ಹಿಂದಿನ ದಿನ ಹೃದಯಾಘಾತ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾಳೆ. ಭಾವಿ ಪತ್ನಿಯನ್ನು ಕಳೆದುಕೊಂಡ ಯುವಕ ಆಘಾತಕ್ಕೆ ಒಳಗಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಸೊಲ್ಲಾಪುರ ಗ್ರಾಮದ 24 ವರ್ಷದ ಶೃತಿ ಎಂಬ ಯುವತಿ ನಾಳೆ ಮದುವೆ ಆಗಬೇಕಿದ್ದು, ಮದುವೆ ಸಂಭ್ರಮದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಕನಸುಗಳೊಂದಿಗೆ ಶುರುವಾಗಬೇಕಿದ್ದ ಮದುವೆ ಸಂಭ್ರಮವು ಈಗ ಕುಟುಂಬದ ಶೋಕದಲ್ಲಿ ಮುಳುಗಿದೆ.
ಇದನ್ನು ಓದಿ : ಬ್ರ್ಯಾಟ್ – ಕೋಣ ನಾಳೆ ಎರಡು ಚಿತ್ರ ರಿಲೀಸ್!

ವೈದ್ಯಕೀಯ ತುರ್ತು ಚಿಕಿತ್ಸೆ ಫಲಿಸದೇ ಪ್ರಾಣಹಾನಿ
ಮದುವೆ ಸಂಭ್ರಮದಲ್ಲಿ ಹಸಮಣೆ ಏರುವ ಶೃತಿಗೆ ಲೋ ಬಿಪಿ ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಆಕೆಯು ಮೃತಪಟ್ಟಿದ್ಧಾಳೆ.
ವರ-ವಧುವಿನ ಕುಟುಂಬಗಳ ಆಘಾತ
ತರೀಕೆರೆ ಮೂಲದ ಯುವಕ ದಿಲೀಪ್ ಜೊತೆ ಶೃತಿ ಮದುವೆ ನಿಶ್ಚಿತವಾಗಿತ್ತು. ಸಂತೋಷದಿಂದ ಹೊಸ ಜೀವನದ ಕನಸು ಕಂಡ ವರ ಮತ್ತು ಕುಟುಂಬವು ಆಘಾತಕ್ಕೆ ಒಳಗಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರು ಮತ್ತು ವರ ಎಲ್ಲರೂ ಶೋಕದಲ್ಲಿ ಮುಳುಗಿದ್ದಾರೆ.
ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ
ಇನ್ನು ಈ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಅರಸೀಕೆರೆಯಲ್ಲಿ ಸಿದ್ಧವಾಗ್ತಿದೆ ಹೊಸ BUS STOP ಕಾಮಗಾರಿ ವೀಕ್ಷಿಸಿದ ಶಾಸಕ ಶಿವಲಿಂಗೇಗೌಡ




