Heart Attack : ವಾಹನದ ಚಾಲಕನಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ.

Heart Attck : ರಾಯಚೂರಿನ (Raichur) ಗಾರಲದಿನ್ನಿ ಸಮೀಪ, ಹತ್ತಿ ತುಂಬಿಕೊಂಡು ಮಾರುಕಟ್ಟೆಗೆ ಸಾಗುತ್ತಿದ್ದ ಪಿಕ್ಅಪ್ ವಾಹನದ ಚಾಲಕ ನರಸಿಂಹ (33) ಎಂಬುವವರಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ, ವಾಹನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ. ಪರಿಣಾಮವಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ವಿವರ
ಇಂದು ಬೆಳಿಗ್ಗೆ ಹತ್ತಿ ಸಾಗಿಸುತ್ತಿದ್ದ ವೇಳೆ, ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಇದನ್ನು ನೋಡಿ : ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ : ಚಾಲಕ ಮೃತ್ಯು

ಚಿಕಿತ್ಸೆ ಪ್ರಯತ್ನ
ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಮಾಡಲಾಗಿತ್ತು, ಆದರೆ ಮಾರ್ಗ ಮಧ್ಯೆ ವಾಹನ ಚಾಲಕ ನರಸಿಂಹ ಸಾವನ್ನಪ್ಪಿದ್ದಾರೆ. ಇನ್ನು ವಾಹನದಲ್ಲಿ ಸಾಗಿಸುತ್ತಿದ್ದ ಹತ್ತಿ ಹೊಲದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಉಂಟಾಗಿದೆ.
ರಾಯಚೂರಿನಲ್ಲಿ ಹೃದಯಾಘಾತದಿಂದ ಸಂಭವಿಸಿದ ಈ ದುರ್ಘಟನೆ ಸ್ಥಳೀಯರಿಗೆ ಶೋಕಾಂತಕರವಾಗಿದೆ. ಪೊಲೀಸರು ಮತ್ತು ಸ್ಥಳೀಯರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಅಶ್ವಿನಿ ಗೌಡಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವ್ಯ




