Kannada Political : ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಅವರು ಸ್ಪೀಕರ್ ಕಚೇರಿಯನ್ನು ಆರ್ಟಿಐ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದು, ಸಿಟ್ಟಿಂಗ್ ಜಡ್ಜ್ ತನಿಖೆ ಅಗತ್ಯ ಎಂದು ತಿಳಿಸಿದ್ದಾರೆ.
ಭರತ್ ಶೆಟ್ಟಿ ಆರೋಪ “ಸ್ಪೀಕರ್ ಕಚೇರಿಯಲ್ಲಿ ಅಕ್ರಮ ನಡೆದಿದೆ”
ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಡಾ. ಭರತ್ ಶೆಟ್ಟಿ (Dr. Y Bharat Shetty) ಅವರು,“ಸ್ಪೀಕರ್ ಹುದ್ದೆಯ ಮೇಲೆ ಭ್ರಷ್ಟಾಚಾರದ ಅನುಮಾನ ಮೂಡಿದೆ. ಕಚೇರಿಯನ್ನು ಆರ್ಟಿಐ ವ್ಯಾಪ್ತಿಗೆ ತರಬೇಕು. ನಮಗೆ ಪ್ರಶ್ನೆ ಕೇಳಲು ಅವಕಾಶವಿಲ್ಲ,”
ಎಂದು ಕಿಡಿಕಾರಿದರು.
ಅವರು ವಿಧಾನಸಭಾ ಉಪಕರಣಗಳ ಖರೀದಿ ಹಾಗೂ ಪುಸ್ತಕ ಮೇಳದ ವೆಚ್ಚದಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧ ಉಪಕರಣಗಳ ಖರೀದಿಯಲ್ಲಿ ಅಕ್ರಮ?
ಭರತ್ ಶೆಟ್ಟಿ ಪ್ರಕಾರ, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸೊಲ್ಯೂಷನ್, ಸ್ಟೇನ್ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ಗಳ ಖರೀದಿಯಲ್ಲಿ ಬೆಲೆ ವ್ಯತ್ಯಾಸ ಕಂಡುಬಂದಿದೆ.
ಇವುಗಳನ್ನು ಮಂಗಳೂರು ಮೂಲದ ಕಂಪನಿಗಳಿಂದ ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿ ಕೂಡ ಇದ್ದು, ಇದರಿಂದ ಗಂಭೀರ ಅನುಮಾನಗಳು ಎದ್ದಿವೆ ಎಂದು ಹೇಳಿದರು.
MUST READ : Bengaluru: ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳ ಆದೇಶಕ್ಕೆ ಹೈಕೋರ್ಟ್ ತಡೆ..!
ವಿಧಾನಸಭಾ ಲಾಂಜ್ ಮಸಾಜ್ ಪಾರ್ಲರ್ನಂತೆ
ಭರತ್ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿ,“ವಿಧಾನಸಭಾ ಲಾಂಜ್ ಅನ್ನು ಮಸಾಜ್ ಪಾರ್ಲರ್ ರೀತಿಯಲ್ಲಿ ಮಾಡಿದ್ದಾರೆ. ಎಲ್ಲರಿಗೂ ಉಚಿತ ಆಹಾರ ಎಂದು ಹೇಳುತ್ತಾರೆ, ಆದರೆ ಅದರ ಲೆಕ್ಕಾಚಾರ ಯಾರಿಗೂ ಗೊತ್ತಿಲ್ಲ,”
ಎಂದು ಕಿಡಿಕಾರಿದರು.
ಎಲ್ಎಚ್ ವರಾಂಡದೊಳಗೆ ನಾಯಿ ತಿರುಗುತ್ತವೆ, ಆದರೆ ಸ್ಪೀಕರ್ ಸ್ಮಾರ್ಟ್ ಲಾಕ್ ಹಾಕಲು ಹೊರಟಿದ್ದಾರೆ.
ಯುಟಿ ಖಾದರ್ ಅವರಿಗೆ ‘ಸರ್ವಜ್ಞ ಸಿಂಡ್ರೋಮ್’ ಇದೆ. ಆರ್ಥಿಕ ಶಿಸ್ತು ಇಲ್ಲದೆ ಸರ್ಕಾರ ಮುಳುಗಿದೆ,”
ಎಂದು ಕಟು ಟೀಕೆ ಮಾಡಿದರು.
4.5 ಕೋಟಿ ರೂ. ಪುಸ್ತಕ ಮೇಳ ವೆಚ್ಚದ ಪ್ರಶ್ನೆ
ಭರತ್ ಶೆಟ್ಟಿ ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳದ ವೆಚ್ಚದ ಬಗ್ಗೆ ಕೂಡ ಪ್ರಶ್ನೆ ಎತ್ತಿದ್ದಾರೆ.
ಅವರ ಪ್ರಕಾರ,“ಐದು ದಿನದ ಪುಸ್ತಕ ಮೇಳಕ್ಕೆ 4.5 ಕೋಟಿ ರೂ. ಖರ್ಚು ಮಾಡಿದ್ದಾರೆ. ಒಂದು ದಿನಕ್ಕೆ ಕೋಟಿಯಷ್ಟು ಖರ್ಚು! ಆದರೆ ರಸ್ತೆ ನಿರ್ಮಾಣಕ್ಕೆ, ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಾರೆ,”
ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯಪಾಲರಿಗೆ ದೂರು, ಅಧಿವೇಶನದಲ್ಲಿ ಚರ್ಚೆ
ಭರತ್ ಶೆಟ್ಟಿ ಅವರು ಈ ಆರೋಪಗಳ ಕುರಿತು ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದಿದ್ದಾರೆ.
ಅದೇ ರೀತಿಯಲ್ಲಿ, ಮುಂದಿನ ವಿಧಾನಸಭಾ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
MUST WATCH : ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಅಲರ್ಟ್ ಶುದ್ಧ ಕುಡಿಯುವ ನೀರಿನ ಘಟಕ್ಕೆ ಸಿಕ್ತು ಮುಕ್ತಿ | GUBBI IMPACT STORY|




