Attack : SSLC ವಿದ್ಯಾರ್ಥಿಯೋರ್ವ ಒಂಬತ್ತನೇ ತರಗತಿ ವಿದ್ಯಾರ್ಥಿ ಮೇಲೆ ಬಿಯರ್ ಬಾಟಲ್ನಿಂದ ಹೊಡೆದು ಹಲ್ಲೆ ಮಾಡಿರೋ ಘಟನೆ ಪಾವಗಡದಲ್ಲಿ ನಡೆದಿದೆ.

SSLC ವಿದ್ಯಾರ್ಥಿಯೋರ್ವ ಒಂಬತ್ತನೇ ತರಗತಿ ವಿದ್ಯಾರ್ಥಿ ಮೇಲೆ ಬಿಯರ್ ಬಾಟಲ್ನಿಂದ ಹೊಡೆದು ಹಲ್ಲೆ ಮಾಡಿರೋ ಪೈಶಾಚಿಕ ಘಟನೆ ಪಾವಗಡ ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದಿದೆ, ಪಾವಗಡ ಪಟ್ಟಣದ ಬಾಪೂಜಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡ್ತಾ ಇದ್ದ ಗಿರೀಶ್ ಎಂಬ ವಿದ್ಯಾರ್ಥಿ ಬಿಯರ್ ಕುಡಿದಿದ್ದಲ್ಲದೇ, ಅದೇ ಬಾಟಲಿಯಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರೋ ಸಂದೇಶ ಎಂಬ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ.
ಇದನ್ನು ಓದಿ : PSI ಆಕಾಂಕ್ಷಿ ವಿದ್ಯಾರ್ಥಿ ಹೃದಯಾಘಾತ ದಿಂದ ಸಾವು
ಇನ್ನು ಹಲ್ಲೆಯನ್ನು ತಡೆಯಲು ಹೋದ ಸರ್ಕಾರಿ ಪ್ರೌಢಶಾಲೆಯ ಅಕ್ಷರ ದಾಸೋಹ ನೌಕರೆ ಲಕ್ಷ್ಮೀದೇವಿ ಎನ್ನುವರು ಹೋದಾಗ ಲಕ್ಷ್ಮೀದೇವಿಗೂ ಸಹ ಧಮ್ಕಿ ಹಾಕಿ ವಿದ್ಯಾರ್ಥಿ ಎಸ್ಕೇಪ್ ಆಗಿದ್ದಾನೆ.s ಇತ್ತ ಬಿಯರ್ ಬಾಟಲ್ನಿಂದ ವಿದ್ಯಾರ್ಥಿ ಸಂದೇಶ್ ಕಿವಿ ಹಾಗೂ ಬೆನ್ನಿಗೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವ ಆಗ್ತಾ ಇದ್ದು, ಕೂಡಲೇ ಗಾಯಗೊಂಡ ವಿದ್ಯಾರ್ಥಿ ಸಂದೇಶ್ನನ್ನು ಲಕ್ಷ್ಮೀದೇವಿಯವರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೆನ್ನಿಗೆ 12 ಹೊಲಿಗೆ ಹಾಕಿದ್ರೆ, ಕಿವಿಗೆ ಪೆಟ್ಟು ಬಿದ್ದಿದ್ದರಿಂದ ಇನ್ನು ವಾರಗಳ ಕಾಲ ವಿದ್ಯಾರ್ಥಿ ಸಂದೇಶ್ ಗುಣಮುಖರಾಗಲು ಸಮಯವಾಕಾಶ ಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಇಬ್ಬರು ಬಾಲಕರು ಪಾವಗಡ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದು, ಯಾವ ಕಾರಣಕ್ಕೆ ಹೀಗೆ ಹಲ್ಲೆ ಮಾಡಿದ್ದಾನೆ ಅನ್ನೋದು ಬಯಲಾಗಬೇಕಿದೆ. ಸದ್ಯ ಈ ಸಂಬಂಧ ವಿದ್ಯಾರ್ಥಿ ಸಂದೇಶ್ ಪೋಷಕರು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುಇದ್ದು, ತನಿಖೆ ಬಳಿಕ ಯಾವ ಕಾರಣಕ್ಕೆ ಹಲ್ಲೆ ಆಗಿದೆ ಅನ್ನೋದು ತಿಳಿದು ಬರಲಿದೆ.

ಇದನ್ನು ನೋಡಿ : HULIYAR ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ವಿರುದ್ಧ ರೊಚ್ಚಿಗೆದ್ದ ರೈತರು, ಜನಪರ ಸಂಘಟನೆಗಳು




