Heart Attack : ಪಿಎಸ್ಐ ಆಕಾಂಕ್ಷಿ ರಾಮಾಂಜನೇಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಗ್ಗಲ್ ಗ್ರಾಮದ ಈ ಯುವಕ ಕಳೆದ 5 ವರ್ಷಗಳಿಂದ ಧಾರವಾಡದಲ್ಲಿ ಅಭ್ಯಾಸ ಮಾಡುತ್ತಿದ್ದರು.

ಇತ್ತೀಚಿಗೆ ಯುವ ಜನತೆಯಲ್ಲಿ ಹೃದಯಘಾತವಾಗೋ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಆರೋಗ್ಯವಂತ ಯುವಕ, ಯುವತಿಯರೇ ಹಾರ್ಟ್ ಅಟ್ಯಾಕ್ನಿಂದ ಸಾಯುತ್ತಿದ್ದಾರೆ.
ಧಾರವಾಡ ನಗರದ ನಿಸರ್ಗ ಲೇಔಟ್ನಲ್ಲಿ ಯುವ PSI ಆಕಾಂಕ್ಷಿ ರಾಮಾಂಜನೇಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಕಗ್ಗಲ್ ಗ್ರಾಮದಿಂದ ಯುವಕರಾದ ರಾಮಾಂಜನೇಯ ಕಳೆದ 5 ವರ್ಷಗಳಿಂದ ಧಾರವಾಡದಲ್ಲಿ ಅಭ್ಯಾಸ ಮಾಡುತ್ತಿದ್ದರು.
ಇದನ್ನು ಓದಿ : ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಮಾಹಿತಿ ನೀಡಿದ ಸೂರ್ಯಕುಮಾರ್

ನಿನ್ನೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದರಿಂದ ರಾಮಾಂಜನೇಯ ಅವರನ್ನು ಸ್ನೇಹಿತರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ನಂತರ, ವೈದ್ಯಕೀಯ ಚಿಕಿತ್ಸೆಗಾಗಿ ಹುಬ್ಬಳ್ಳಿ KIMS ಆಸ್ಪತ್ರೆಗೆ ರವಾನಿಸುತ್ತಿದ್ದರು.
ಆದರೆ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ರಾಮಾಂಜನೇಯ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ನೋಡಿ : ಅಂಬೇಡ್ಕರ್ ಹಾಗೂ ಗಾಂಧಿ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲ ಪೂಜೆ




