Police Hat : ರಾಜ್ಯದ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಹೆಡ್ ಕಾನ್ಸ್ಟೆಬಲ್ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪಿ-ಕ್ಯಾಪ್’ಗಳನ್ನು ವಿತರಣೆ ಮಾಡಲಾಗುತ್ತಿದೆ.

ರಾಜ್ಯದ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಹೆಡ್ಕಾನ್ಸ್ಟೆಬಲ್ಗಳು ಧರಿಸುತ್ತಿದ್ದ ಪಾರಂಪರಿಕ ‘ಸ್ಲೋಚ್ ಹ್ಯಾಟ್’ಗಳಿಗೆ ವಿದಾಯ ಹೇಳುವ ಸಮಯ ಬಂದಿದೆ. ಇದರ ಬದಲಿಗೆ ಇದೀಗ ಆಧುನಿಕ ‘ಪಿ-ಕ್ಯಾಪ್’ಗಳನ್ನು (P-Cap) ವಿತರಣೆ ಮಾಡುವ ಕಾರ್ಯ (ಮಂಗಳವಾರ) ಇಂದಿನಿಂದ ಆರಂಭವಾಗುತ್ತಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಕ್ಯಾಪ್ಗಳನ್ನು ವಿತರಣೆ ಮಾಡಲಿದ್ದಾರೆ. ನಂತರ ಹಂತಹಂತವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕಾನ್ಸ್ಟೆಬಲ್ ಮತ್ತು ಹೆಡ್ಕಾನ್ಸ್ಟೆಬಲ್ಗಳಿಗೆ ‘ಪಿ-ಕ್ಯಾಪ್’ ವಿತರಣೆ ನಡೆಯಲಿದೆ.
ಇದನ್ನು ಓದಿ : ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ; ಹಳೆಯ ಸ್ಲೋಚ್ ಹ್ಯಾಟ್ಗಳಿಗೆ ಗುಡ್ ಬೈ

ಇನ್ನುಜೂನ್ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ನಂತರ ತೆಲಂಗಾಣ ಪೊಲೀಸರು ಬಳಸುತ್ತಿರುವ ಮಾದರಿಯ ತೆಳುವಾದ ‘ಪಿ-ಕ್ಯಾಪ್’ ವಿನ್ಯಾಸಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡಿತ್ತು.
ಆಗಸ್ಟ್ 7ರಂದು ನಡೆದಿದ್ದ ಕಿಟ್ ನಿರ್ದಿಷ್ಟಿತಾ ಸಮಿತಿ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲಾಯಿತು. ಇದೀಗ ಹೊಸ ಕ್ಯಾಪ್ಗಳು ತಯಾರಾಗಿ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ವಿತರಣೆ ಆರಂಭವಾಗಲಿದೆ.
ಈ ಹೊಸ ರೂಪದ ಕ್ಯಾಪ್ಗಳು ಹಗುರವಾಗಿದ್ದು, ಧರಿಸಲು ಸುಲಭವಾಗಿವೆ. ಸೂರ್ಯನ ತಾಪಮಾನದಿಂದ ರಕ್ಷಣೆ ನೀಡುವಂತೆಯೇ, ಪೊಲೀಸ್ ಪಡೆಗೆ ಸಮಾನತೆಯ ಹೊಸ ಗುರುತನ್ನು ನೀಡಲಿವೆ ಎಂದು ಹೇಳಲಾಗಿದೆ.

ಇದನ್ನು ನೋಡಿ : ಸ್ವಂತ ಅತ್ತಿಗೆ ಮೇಲೆ ಇದೆಂಥಾ ಅಟ್ಟಹಾಸ ರಾಕ್ಷಸನಂತೆ ಹಲ್ಲೆ ಮಾಡಿದ ಮೈದುನ




