GOLD RATE TODAY : ಇಂದು ಚಿನ್ನದ ಬೆಲೆಯಲ್ಲಿ 105 ರೂ ಇಳಿಕೆಯಾದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಆಭರಣ ಚಿನ್ನದ ಬೆಲೆ 11,515 ರೂನಿಂದ 11,410 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 12,448 ರೂಗೆ ಇಳಿದಿದೆ.

GOLD RATE TODAY: ಕಳೆದ ಕೆಲವು ವಾರಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. ಸೋಮವಾರದ ವಹಿವಾಟಿನಲ್ಲಿ ಗ್ರಾಮ್ಗೆ ₹100ರಿಂದ ₹140ರವರೆಗೆ ಚಿನ್ನದ ದರ ಕಡಿಮೆಯಾಗಿದೆ.
ಹೌದು ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಸಣ್ಣ ಪ್ರಮಾಣದ ಏರಿಳಿತಗಳು ಕಂಡುಬಂದಿದ್ದರೂ, ಭಾರತದಲ್ಲಿ ಬೆಲೆಗಳಲ್ಲಿ ಗಮನಾರ್ಹ ಬದಲಾವಣೆಗಳಿಲ್ಲ.
ಇದನ್ನೂ ಓದಿ : Women’s World Cup 2025: ಮಹಿಳಾ ವಿಶ್ವಕಪ್ ಸೆಮಿಫೈನಲ್ ಮುನ್ನ ಟೀಮ್ ಇಂಡಿಯಾಗೆ ಆಘಾತ..!
ಸದ್ಯ ಭಾರತದಲ್ಲಿ ಚಿನ್ನದ ಬೆಲೆ ಈ ಕೆಳಗಿನಂತಿದೆ.
- 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹1,14,100
- 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹1,24,480
- 100 ಗ್ರಾಂ ಬೆಳ್ಳಿ ಬೆಲೆ ₹15,500
ಇನ್ನು ಬೆಂಗಳೂರಿನಲ್ಲಿ, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,14,100 ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹15,700 ಇದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ದಕ್ಷಿಣ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 100 ಗ್ರಾಂಗೆ ₹17,000 ತಲುಪಿದೆ.
MUST WATCH : POLICE V/S PUBLIC |ಪೊಲೀಸರೊಂದಿಗೆ ಫೈನ್ ಕಚ್ಚಾಟ- ದಿಢೀರ್ ಪ್ರತಿಭಟನೆಗೆ ವಾಹನ ಸವಾರರು ಆಕ್ರೋಶ | TUMAKURU NEWS




