Murder : ತಂದೆಯನ್ನು ಸ್ವಂತ ಮಗನೇ ಆಯುಧದಿಂದ ಹೊಡೆದು ನಂತರ ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ತಂದೆಯನ್ನು ಸ್ವಂತ ಮಗನೇ ಆಯುಧದಿಂದ ಹೊಡೆದು, ನಂತರ ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಹತ್ಯೆಯಾದ ವೃದ್ಧ ಶಂಕರನ್
ಮಲೆ ಮಹದೇಶ್ವರ ಬೆಟ್ಟದ ತಪ್ಪಲಲ್ಲಿನ ಗೋಪಿನಾಥಂ ಗ್ರಾಮದ ಶಂಕರನ್ (70) ಮೃತಪಟ್ಟ ವೃದ್ಧ ಎಂದು ಗುರುತಿಸಲಾಗಿದೆ. ಈತನ ಎರಡನೇ ಮಗ ಗೋವಿಂದರಾಜ್ ತಂದೆಯನ್ನು ಹತ್ಯೆ ಮಾಡಿದ ಆರೋಪಿಯಾದ್ದಾನೆ.
ನಾಪತ್ತೆಯಿಂದ ಆರಂಭವಾದ ಪ್ರಕರಣ
ಎರಡು ದಿನಗಳಿಂದ ಶಂಕರನ್ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ಶನಿವಾರ ಸಂಜೆ ಗೋಪಿನಾಥಂ ಸಮೀಪದ ಕಾವೇರಿ ನದಿಯಲ್ಲಿ ಶಂಕರನ್ ಅವರ ಮೃತದೇಹ ತೇಲುತ್ತಿರುವುದು ಪತ್ತೆಯಾಯಿತು.
ಇದನ್ನು ಓದಿ : ಅಶ್ವಿನಿ ಗೌಡ ಮೇಲೆ ಕಾವ್ಯ ಬೆಂಕಿ ಕಿಡಿ

ಮಗನ ವಿರುದ್ಧ ತಾಯಿಯ ದೂರು
ಮೃತನ ಪತ್ನಿ ಪಳನಿಯಮ್ಮ ತಮ್ಮ ಮಗ ಗೋವಿಂದರಾಜ್ ತಂದೆಯನ್ನು ಆಯುಧದಿಂದ ಹೊಡೆದು ಕಾವೇರಿ ನದಿಗೆ ತಳ್ಳಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ.
ಜಗಳದ ಮೂಲ : ಮೇಕೆ ಹಂಚಿಕೆ ವಿಚಾರ
ಶಂಕರನ್ ಹಾಗೂ ಗೋವಿಂದರಾಜ್ ಇಬ್ಬರೂ ಮೇಕೆ ಸಾಕಾಣಿಕೆ ಮಾಡುತ್ತಿದ್ದರು. ಮೇಕೆಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ತಂದೆ-ಮಗನ ನಡುವೆ ಜಗಳ ಉಂಟಾಗಿ, ಅದು ವಿಕೋಪಕ್ಕೆ ತಿರುಗಿ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆ ಮುಂದುವರಿದಿದೆ
ಇನ್ನು ಈ ಬಗ್ಗೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸ್ಥಳೀಯರಲ್ಲಿ ಈ ಘಟನೆ ಆಘಾತ ಮೂಡಿಸಿದೆ.

ಇದನ್ನು ನೋಡಿ : KANAKAPURAದ ಬಂಡೆ CM ಕನಸು ನನಸಾಗುತ್ತಾ? – CONGRESS ಕೈ ಕೊಟ್ರೆ ಕಮಲ ಹಿಡಿತಾರಾ DK SHIVAKUMAR




