BBK 12 : ಬಿಗ್ಬಾಸ್ನಲ್ಲಿ ಇವತ್ತು ‘ಸಂಡೆ ವಿತ್ ಬಾದ್ ಷಾ ಸುದೀಪ್’ ಸಂಚಿಕೆ ಪ್ರಸಾರವಾಗಲಿದೆ.

ಬಿಗ್ ಬಾಸ್ ಮನೆಯಲ್ಲಿ ಇಂದು ಭಾನುವಾರದ ಸಂಚಿಕೆ ‘ಸಂಡೆ ವಿತ್ ಬಾದ್ ಷಾ ಸುದೀಪ್’ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೊಮೋ ವೀಕ್ಷಕರಲ್ಲಿ ಅಪಾರ ಉತ್ಸಾಹ ಮೂಡಿಸಿದೆ.
ಮಲ್ಲಮ್ಮ ಆಟದ ಮೇಲೆ ಅಸಮಾಧಾನ
ಈ ವಾರದ ಪ್ರೊಮೋದಲ್ಲಿ ಮಲ್ಲಮ್ಮ ಮತ್ತು ಧ್ರುವಂತ್ ಆಟದ ಬಗ್ಗೆ ಕಿಚ್ಚ ಸುದೀಪ್ ಅವರ ಎದುರು ಚರ್ಚೆ ನಡೆದಿರುವುದು ಗೋಚರಿಸಿದೆ. ಮಲ್ಲಮ್ಮ ಆಟದ ಕುರಿತು ಕಾಕ್ರೋಚ್, ಧ್ರುವಂತ್ ಮತ್ತು ಗಿಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಕ್ರೋಚ್ ಮಲ್ಲಮ್ಮನ ಬಗ್ಗೆ ಮಾತನಾಡಿದ ರೀತಿಗೆ ಮಲ್ಲಮ್ಮ ಬೇಸರಗೊಂಡಿದ್ದಾರೆ ಎಂಬುದು ಪ್ರೊಮೋದಲ್ಲಿ ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಧ್ರುವಂತ್ ಹಾಗೂ ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡಬೇಕಿದೆ.
ನಕ್ಕು ಸುಸ್ತಾಗೋ ಎಪಿಸೋಡ್ ಖಚಿತ!
ಪ್ರತಿ ಭಾನುವಾರ ಪ್ರೇಕ್ಷಕರಿಗೆ ಮನರಂಜನೆ ನೀಡುವ ಕಿಚ್ಚ ಸುದೀಪ್ ಈ ಬಾರಿ ಕೂಡ ಹಾಸ್ಯದ ಸಿಡಿಲು ಹಾರಿಸಿದ್ದಾರೆ. ಗಿಲ್ಲಿಯನ್ನು ನೋಡಿ “ಕ್ಲೀನ್ ಕೃಷ್ಣಪ್ಪ ಗಿಲ್ಲಿ..!” ಎಂದು ತಮಾಷೆ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಹಾಗೂ ಕಾವ್ಯ ನಡುವಿನ ಸಂಭಾಷಣೆ ನಗುವಿನ ಚಟಾಕಿ ನೀಡಿದ್ದು, ಅದಕ್ಕೆ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದಾರೆ.
ಇದನ್ನು ಓದಿ : ಮಳೆಯ ಅಬ್ಬರಕ್ಕೆ ಹಾಳಾದ ಹೂ ತೋಟ – ರೈತ ಕಂಗಾಲು

ತಲೆಗೆ ಪಟಾರ್ ಅಂತಾ ಕೊಟ್ಟ ಎದುರಾಳಿಗಳು
ಇನ್ನು ತಮಗೆ ಇಷ್ಟವಾಗದ ಅಸ್ಪರ್ಧಿಗಳ ಮೇಲೆ ಆಕ್ರೋಶ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಬಿಗ್ಬಾಸ್ ಕಿಚ್ಚನ ಸಮ್ಮುಖದಲ್ಲಿ ವಿಶೇಷ ಚಟುವಟಿಕೆ ನೀಡಿದ್ದಾರೆ.
ಅದರಲ್ಲಿ ಯಾರಾದರೂ ಸ್ಪರ್ಧಿಗಳಿಗೆ ಏನಾದರೂ ಹೇಳಬೇಕು ಅಂದರೆ ತಲೆ ಮೇಲೆ ಹೊಡೆದಂಗೆ ವಿಷಯ ಹೇಳಿಬಿಟ್ಟು ಬನ್ನಿ ಎಂದಿದ್ದಾರೆ. ಈ ಚಟುವಟಿಕೆಯಲ್ಲಿ ಮಲ್ಲಮ್ಮ ಕೂಡ ರೊಚ್ಚಿಗೆದ್ದಿದ್ದಾರೆ. ಅಶ್ವಿನಿ ಗೌಡ ಮೇಲೆ ಕಾವ್ಯ ಶೈವ ಆಕ್ರೋಶ ವ್ಯಕ್ತಪಡಿಸಿದ್ರೆ, ಜಾಹ್ನವಿ ಮೇಲೆ ರಿಷಾ ಗೌಡ, ರಿಷಾ ಗೌಡ ಮೇಲೆ ಜಾಹ್ನವಿ ರೊಚ್ಚಿಗೆದ್ದಿದ್ದಾರೆ.
ವೀಕ್ಷಕರಲ್ಲಿ ಕುತೂಹಲ
ಇನ್ನು ಪ್ರೊಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂದಿನ ಸಂಚಿಕೆ ಬಗ್ಗೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನು ನೋಡಿ : ಗಿಲ್ಲಿ ನಗುವಿನ ಟಾನಿಕ್.. ಅಶ್ವಿನಿ ಮೇಲೆ ಕಾವ್ಯ ಬೆಂಕಿ ಕಿಡಿ.. ಬಿಗ್ಬಾಸ್ನಲ್ಲಿ ಇವತ್ತು ಏನೇನು..?




