Rain Effect : ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವಾರದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ. ಈ ನಡುವೆ ಜಿಟಿ ಜಿಟಿ ಮಳೆಗೆ ಹೂವಿನ ತೋಟಗಳು ಕೊಳೆತು ಬಾಡಿ ಹೋಗುವಂತೆ ಮಾಡಿದೆ.

ಚಿತ್ರದುರ್ಗದಲ್ಲಿ ಸತತ ಮಳೆಯಿಂದ ನೂರಾರು ಎಕರೆ ಹೂದೋಟ ನಾಶವಾಗುತ್ತಿದ್ದು, ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗೆ ತೋಟದಲ್ಲೇ ಅರಳಿ ನಿಂತಿರೋ ಸೇವತಿ ಹೂ. ಜಿಟಿ ಜಿಟಿ ಮಳೆ ಸಿಲುಕಿ ಗಿಡದಲ್ಲೇ ಕೊಳೆಯುತ್ತಿರುವ ಹೂವ್ವಿನ ಬೆಳೆ. ಮಳೆಯಲ್ಲೇ ಹೂ ಕಟಾವು ಮಾಡಲು ಹರಸಾಹಸ ಮಾಡುತ್ತಿರುವ ರೈತರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಬರದನಾಡು ಚಿತ್ರದುರ್ಗ ಜಿಲ್ಲೆಯ ಹುಣಸೇಕಟ್ಟೆ ಗ್ರಾಮದಲ್ಲಿ.
ಚಿತ್ರದುರ್ಗದ ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಹೂವುಗಳನ್ನ ಬೆಳೆಯುತ್ತಾರೆ. ಸೇವಂತಿ, ಕನಕಾಂಭರ, ಮಲ್ಲಿಗೆ, ಚೆಂಡುವೂ ಸೇರಿ ವಿವಿಧ ಜಾತಿಯ ಹೂವ್ವಿನ ಬೆಳೆಗಳಿಗೆ ಚಿತ್ರದುರ್ಗ ಗ್ರಾಮೀಣಾ ಭಾಗದ ಅನ್ನದಾತರು ಪೇಮಸ್ ಆಗಿದ್ದಾರೆ.
ಇದನ್ನು ಓದಿ : KKR ಗೆ ಅಭಿಷೇಕ್ ನಾಯರ್ ಮುಖ್ಯ ಕೋಚ್?

ಇನ್ನೂ ದಸರಾ & ದೀಪಾವಳಿ ಹಬ್ಬಗಳ ನಡುವೆ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ, ಜಿಟಿ ಜಿಟಿ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಅಲ್ಲದೆ ಮಾರುಕಟ್ಟೆಗೆ ಮಳೆಯ ನಡುವೆ ತೇವಾಂಶ ಇರುವ ಹೂವುಗಳು ಬರುತ್ತಿದ್ದು, ಇದೇ ಕಾರಣಕ್ಕೆ ಹೂವಿನ ಬೆಲೆ ಕೂಡಾ ಕುಸಿತ ಕಂಡಿದ್ದು, ಕಟಾವು ಆಗದೇ ತೋಟದಲ್ಲೇ ಹೂ ಕೊಳೆಯುತ್ತಿದೆ.
ಸತತ ಸುರಿಯುತ್ತಿರುವ ಜಿಟಿ ಜಿಟಿ ಮಳೆ, ಹೂವ್ವಿನ ಬೆಳೆಗಾರರನ್ನ ಸಂಕಷ್ಟಕ್ಕೆ ದೂಡಿದೆ. ಇನ್ನಾದ್ರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮೈ ಚಳಿ ಬಿಟ್ಟು, ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ನೀಡಿ, ಪರಿಹಾರ ಬಿಡುಗಡೆಗೆ ಮುಂದಾಗಬೇಕಿದೆ.

ಇದನ್ನು ನೋಡಿ : ಅ.27 ,28 ರಂದು VAISIRI COLLEGEನಲ್ಲಿ – ‘V-INFINITY 2025’ EXPO




